ADVERTISEMENT

ಒಹಿಯೊ ಗವರ್ನರ್ ಸ್ಥಾನಕ್ಕೆ ಸ್ಪರ್ಧಿಸಿರುವ ವಿವೇಕ್‌ಗೆ ಬೆಂಬಲ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2025, 15:36 IST
Last Updated 6 ಫೆಬ್ರುವರಿ 2025, 15:36 IST
   

ಕೊಲಂಬಸ್: ಒಹಿಯೊ ರಾಜ್ಯದ ಗವರ್ನರ್ ಸ್ಥಾನದ ಆಕಾಂಕ್ಷಿಯಾಗಿ 2026ರ ಚುನಾವಣೆಗೆ ಸಿದ್ಧತೆ ನಡೆಸಿರುವ ಭಾರತ ಮೂಲದ ವಿವೇಕ್‌ ರಾಮಸ್ವಾಮಿ ಅವರಿಗೆ, ಎರಡು ಅವಧಿಗೆ ಖಜಾಂಚಿಯಾಗಿದ್ದ ರಾಬರ್ಟ್‌ ಸ್ಪ್ರೇಗ್ ಬೆಂಬಲ ಘೋಷಿಸಿದ್ದಾರೆ.

‘ರಾಮಸ್ವಾಮಿ ಅವರ ಪ್ರಯತ್ನಗಳಿಗೆ ಪೂರ್ಣ ಬೆಂಬಲ ನೀಡಲಾಗುವುದು’ ಎಂದು 51 ವರ್ಷ ವಯಸ್ಸಿನ ಸ್ಪ್ರೇಗ್ ‘ಎಕ್ಸ್‌’ ಮೂಲಕ ಪ್ರಕಟಿಸಿದ್ದಾರೆ. ರಾಮಸ್ವಾಮಿ ಅವರು 2024ರ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕಬ್‌ ಪಕ್ಷದಿಂದ ಸ್ಪರ್ಧಿಸಲು ಆಸಕ್ತರಾಗಿದ್ದರು.

ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಸರ್ಕಾರದಲ್ಲಿ ವೆಚ್ಚ ನಿಯಂತ್ರಣ ಕ್ರಮಗಳಿಗೆ ಸಂಬಂಧಿಸಿದ ಇಲಾಖೆಯಲ್ಲಿ ಕೆಲ ಕಾಲ ರಾಮಸ್ವಾಮಿ ಅವರು ಕಾರ್ಯನಿರ್ವಹಿಸಿದ್ದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.