
2025-26ರಲ್ಲಿ ಮಹಿಳೆಯರು ಅತೀ ಹೆಚ್ಚು ಅಪಾಯಗಳನ್ನು ಎದುರಿಸುವ ವಿಶ್ವದ ಅಗ್ರ 10 ದೇಶಗಳ ಪಟ್ಟಿಯನ್ನು ಜಾರ್ಜ್‌ಟೌನ್ ಇನ್‌ಸ್ಟಿಟ್ಯೂಟ್ ಪ್ರಕಟಿಸಿದೆ.

ಅಫ್ಗಾನಿಸ್ತಾನ: ವರದಿಯ ಪ್ರಕಾರ ಈ ದೇಶದ ಮಹಿಳೆಯರು ಹೆಚ್ಚು ಅಪಾಯ ಎದುರಿಸುತ್ತಾರೆ ಎಂದು ತಿಳಿಸಿದೆ. ಮಹಿಳೆಯರ ಅಸುರಕ್ಷತೆ ಶ್ರೇಯಾಂಕದಲ್ಲಿ 0.279 ಅಂಕ ಗಳಿಸಿದೆ.
ಯೆಮೆನ್: 0.323 ಅಂಕಗಳೊಂದಿಗೆ ಮಹಿಳೆಯರಿಗೆ ಅಸುರಕ್ಷತೆ ಇರುವ 2ನೇ ದೇಶವಾಗಿದೆ.
ಮಧ್ಯ ಆಫ್ರಿಕನ್ ಗಣರಾಜ್ಯ (Central African Republic): ಮಹಿಳೆಯರ ಅಸುರಕ್ಷತೆಯಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ. 0.362 ಅಂಕ ಗಳಿಸಿದೆ.
ಸಿರಿಯನ್ ಅರಬ್ ಗಣರಾಜ್ಯ: Syrian Arab Republic 0.364 ಅಂಕಗಳೊಂದಿಗೆ ಮಹಿಳೆಯರ ಅಸುರಕ್ಷತೆ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.
ಸುಡಾನ್: ಈ ದೇಶವು 0.364 ಅಂಕದೊಂದಿಗೆ 5ನೇ ಸ್ಥಾನದಲ್ಲಿದೆ.
ಹೈತಿ (Haiti): 6ನೇ ಸ್ಥಾನ ಹೈಟಿ ದೇಶವಿದೆ. ಇದು ಮಹಿಳೆಯರ ಅಸುರಕ್ಷತೆಯಲ್ಲಿ 0.399 ಅಂಕ ಗಳಿಸಿದೆ.
ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ (Democratic Republic of the Congo): 0.405ರ ಅಂಕದೊಂದಿಗೆ ಈ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.
ಬುರುಂಡಿ: 0.407 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ.
ದಕ್ಷಿಣ ಸುಡಾನ್: 0.411 ಅಂಕ ಗಳಿಸುವ ಮೂಲಕ ಈ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
ಮ್ಯಾನ್ಮಾರ್: 0.442 ಅಂಕಗಳೊಂದಿಗೆ ವಿಶ್ವದ ಮಹಿಳೆಯರ ಅತ್ಯಂತ ಅಸುರಕ್ಷಿತ ದೇಶದಲ್ಲಿ 10ನೇ ಸ್ಥಾನ ಪಡೆದಿದೆ.
ಈ ವರದಿಯ ಪ್ರಕಾರ ಭಾರತವು 181 ದೇಶಗಳ ಪೈಕಿ 131ನೇ ಸ್ಥಾನ ಪಡೆದಿದೆ. 0.607 ಅಂಕ ಗಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.