ADVERTISEMENT

ಬ್ರಿಟನ್‌ ಆರೋಗ್ಯ ಸಚಿವೆಗೆ ಕೋವಿಡ್‌

ಪಿಟಿಐ
Published 11 ಮಾರ್ಚ್ 2020, 23:26 IST
Last Updated 11 ಮಾರ್ಚ್ 2020, 23:26 IST
ನಾಡಿನ್‌ ಡೋರಿಸ್‌
ನಾಡಿನ್‌ ಡೋರಿಸ್‌   

ಲಂಡನ್: ಬ್ರಿಟನ್‌ನ ಆರೋಗ್ಯ ಸಚಿವೆ ಹಾಗೂ ಕನ್ಸರ್ವೇಟಿವ್‌ ಪಕ್ಷದ ಸಂಸದೆ ನಾಡಿನ್‌ ಡೋರಿಸ್‌ ಅವರಿಗೆ ಕೋವಿಡ್‌–19 ತಗುಲಿರುವುದು ದೃಢಪಟ್ಟಿದೆ.

ಪ್ರಧಾನಿ ಬೋರಿಸ್‌ ಜಾನ್ಸನ್‌ ಕಳೆದ ವಾರ ಹಮ್ಮಿ ಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ನಾಡಿನ್‌ ಅವರು ಪಾಲ್ಗೊಂಡಿದ್ದರು. ಇದರಿಂದಾಗಿ ಇತರ ಸಂಸದರಲ್ಲೂ ಸೋಂಕು ತಗುಲಿರುವ ಭೀತಿ ಎದುರಾಗಿದೆ.

‘ಸೋಂಕು ತಗುಲಿರುವುದು ದೃಢಪಟ್ಟ ಕೂಡಲೇ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಗಳನ್ನು ತೆಗೆದುಕೊಂಡಿದ್ದೇನೆ. ಮನೆಯಲ್ಲೇ ಪ್ರತ್ಯೇಕವಾಗಿ ಉಳಿದುಕೊಂಡಿದ್ದೇನೆ’ ಎಂದು ನಾಡಿನ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.