ADVERTISEMENT

ವಾಯು ಮಾಲಿನ್ಯ: ದೆಹಲಿಯಲ್ಲ ಮೇಘಾಲಯದ ಬೊರ್ನಿಹಾಟ್‌ನಲ್ಲಿ ಹೆಚ್ಚು

ಪಿಟಿಐ
Published 11 ಮಾರ್ಚ್ 2025, 18:50 IST
Last Updated 11 ಮಾರ್ಚ್ 2025, 18:50 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಭಾರತದ ಈಶಾನ್ಯ ರಾಜ್ಯಗಳು ತನ್ನ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರು ಗಳಿಸಿರುವ ಪ್ರದೇಶಗಳು. ಆದರೆ, ಮೇಘಾಲಯದ ಬೊರ್ನಿಹಾಟ್‌ ನಗರವು ಈ ಹೆಸರನ್ನು ಕಳಚಿಕೊಂಡು ಜಗತ್ತಿನಲ್ಲಿಯೇ ಅತಿ ಹೆಚ್ಚು ವಾಯು ಮಾಲಿನ್ಯ ಹೊಂದಿರುವ ನಗರವಾಗಿ ಮಾರ್ಪಟ್ಟಿದೆ. ಸ್ವಿಟ್ಜರ್‌ಲೆಂಡ್‌ನ ವಾಯು ಗುಣಮಟ್ಟ ತಂತ್ರಜ್ಞಾನ ಕಂಪನಿಯಾದ ‘ಐಕ್ಯೂಏರ್‌’ (IQAir) ‘ದಿ ವರ್ಲ್ಡ್‌ ಏರ್‌ ಕ್ವಾಲಿಟಿ ರಿಪೋರ್ಟ್‌ 2024’ ಅನ್ನು ಮಂಗಳವಾರ ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಭಾರತದ ಕುರಿತು ಹಲವು ಅಂಶಗಳು ಪ್ರಸ್ತಾಪಿತಗೊಂಡಿವೆ

* ಜಗತ್ತಿನಲ್ಲಿರುವ ಅತಿ ಹೆಚ್ಚು ವಾಯು ಮಾಲಿನ್ಯ ಹೊಂದಿರುವ 20 ನಗರಗಳ ಪೈಕಿ 13 ನಗರಗಳು ಭಾರತದಲ್ಲಿಯೇ ಇವೆ.

ADVERTISEMENT

* ಜಗತ್ತಿನ ಅತಿ ಹೆಚ್ಚು ವಾಯು ಮಾಲಿನ್ಯ ಹೊಂದಿರುವ 10 ನಗರಗಳ ಪೈಕಿ 6 ನಗರಗಳು ಭಾರತದಲ್ಲಿವೆ.

* ಜಗತ್ತಿನಲ್ಲಿ ಅತಿ ಹೆಚ್ಚು ವಾಯು ಮಾಲಿನ್ಯ ಹೊಂದಿರುವ ದೇಶಗಳ ಪೈಕಿ ಭಾರತವು 5ನೇ ಸ್ಥಾನದಲ್ಲಿದೆ (2023ರಲ್ಲಿ 3ನೇ ಸ್ಥಾನದಲ್ಲಿತ್ತು).

* ಜಗತ್ತಿನಲ್ಲಿ ಅತಿ ಹೆಚ್ಚು ವಾಯು ಮಾಲಿನ್ಯ ಹೊಂದಿರುವ ರಾಷ್ಟ್ರ ರಾಜಧಾನಿಗಳ ಪಟ್ಟಿಯಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದೆ.

13 ನಗರಗಳು ಯಾವುವು?

1. ಬೊರ್ನಿಹಾಟ್‌, ಮೇಘಾಲಯ

2. ದೆಹಲಿ (ಕೇಂದ್ರಾಡಳಿತ ಪ್ರದೇಶ)

4. ಮುಲ್ಲಂಪುರ, ಪಂಜಾಬ್‌

6. ಫರೀದಾಬಾದ್‌, ಹರಿಯಾಣ

8. ಲೋಣಿ, ಉತ್ತರ ಪ್ರದೇಶ

9. ನವದೆಹಲಿ, ದೆಹಲಿ

13. ಗುರುಗ್ರಾಮ, ಹರಿಯಾಣ

14. ಗಂಗಾನಗರ, ರಾಜಸ್ಥಾನ

16. ಗ್ರೇಟರ್‌ ನೊಯಿಡಾ, ಉತ್ತರ ಪ್ರದೇಶ

17. ಭಿವಾಡಿ, ರಾಜಸ್ಥಾನ

18. ಮುಜಾಫರ್‌ನಗರ, ಉತ್ತರ ಪ್ರದೇಶ

19. ಹನುಮಗಢ, ರಾಜಸ್ಥಾನ

20. ನೊಯಿಡಾ, ಉತ್ತರ ಪ್ರದೇಶ

(ಜಗತ್ತಿನ 20 ನಗರಗಳ ಪಟ್ಟಿಯಲ್ಲಿ ಭಾರತದ 13 ನಗರಗಳನ್ನು ಅದರ ಸ್ಥಾನಕ್ಕೆ ಅನುಗುಣವಾಗಿ ಕ್ರಮವಾಗಿ ಬರೆಯಲಾಗಿದೆ)

––

ಒಂದು ಘನ ಮೀಟರ್‌ನಷ್ಟು ಗಾಳಿಯಲ್ಲಿ 2.5 ಮೈಕ್ರಾನ್‌ ಗಾತ್ರದ 5 ಮೈಕ್ರೋಗ್ರಾಂನಷ್ಟು ಪ್ರಮಾಣದಲ್ಲಿ ಮಾಲಿನ್ಯಕಾರಕ ಕಣಗಳು ಇದ್ದರೆ, ಅದು ಸುರಕ್ಷಿತ ಮಟ್ಟ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ

* ಈ ಪ್ರಮಾಣವನ್ನು ಭಾರತದ ಶೇ 35ರಷ್ಟು ನಗರಗಳು 10 ಪಟ್ಟಿನಷ್ಟು ಮೀರುತ್ತಿವೆ

* ಬೊರ್ನಿಹಾಟ್‌ನಲ್ಲಿ 128.2 ಮೈಕ್ರೋಗ್ರಾಂ ಮಾಲಿನ್ಯಕಾರಕ ಕಣಗಳು ಇವೆ (ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಮಾಡಿರುವ ಮಿತಿಗಿಂತ 25 ಪಟ್ಟು ಹೆಚ್ಚು)

––––––––

50.6 ಮೈಕ್ರೋಗ್ರಾಂ;2023ರಲ್ಲಿ ಭಾರತದ ಸ್ಥಿತಿ

54.4 ಮೈಕ್ರೋಗ್ರಾಂ;2024ರಲ್ಲಿ ಭಾರತದ ಸ್ಥಿತಿ

(ಶೇ 7.5ರಷ್ಟು ಇಳಿಕೆ)

–––––

102.4 ಮೈಕ್ರೋಗ್ರಾಂ;2023ರ ದೆಹಲಿಯ ಸ್ಥಿತಿ

108.3 ಮೈಕ್ರೋಗ್ರಾಂ;2024ರಲ್ಲಿ ದೆಹಲಿಯ ಸ್ಥಿತಿ

(ಶೇ 5.7ರಷ್ಟು ಏರಿಕೆ)

–––––––––––––––––––

28.6 ಮೈಕ್ರೋಗ್ರಾಂ;2023ರಲ್ಲಿ ಬೆಂಗಳೂರಿನ ಸ್ಥಿತಿ

30 ಮೈಕ್ರೋಗ್ರಾಂ;2024ರಲ್ಲಿ ಬೆಂಗಳೂರಿನ ಸ್ಥಿತಿ

(ಶೇ 4ರಷ್ಟು ಏರಿಕೆ)

ಬೊರ್ನಿಹಾಟ್‌: ಕಳಪೆ ಸಾಧನೆ

ಭಾರತದ ಮಟ್ಟಿಗೆ 2024ರಲ್ಲಿ ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನ ವಾಯು ಮಾಲಿನ್ಯ ಹಬ್ಬಿದೆ. ಮೇಘಾಲಯದ ಬೊರ್ನಿಹಾಟ್‌ ನಗರವು 2023ರಲ್ಲಿ ದೇಶದಲ್ಲಿಯೇ ಅಧಿಕ ವಾಯು ಮಾಲಿನ್ಯ ಹೊಂದಿದ ನಗರ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪಟ್ಟಿ ಮಾಡಿತ್ತು. ಜೊತೆಗೆ ಮಾಲಿನ್ಯ ಸೂಚ್ಯಂಕದಲ್ಲಿ ‘ಅತ್ಯಂತ ಕಳಪೆ’ ಎಂದು ಹೇಳಿತ್ತು. 2024ರಲ್ಲಿ ಈ ನಗರವು ಜಗತ್ತಿನಲ್ಲಿಯೇ ಅಧಿಕ ವಾಯು ಮಾಲಿನ್ಯ ಹೊಂದಿದ ನಗರವಾಗಿ ಮಾರ್ಪಟ್ಟಿದೆ.

ಡಿಸ್ಟಿಲರಿಗಳು ಕಾರ್ಖಾನೆಗಳು ಸೇರಿದಂತೆ ಸ್ಥಳೀಯವಾಗಿರುವ ವಿವಿಧ ಕಾರ್ಖಾನೆಗಳು, ಕಬ್ಬಿಣ ಮತ್ತು ಉಕ್ಕಿನ ಘಟಕಗಳ ಕಾರಣದಿಂದ ಬೊರ್ನಿಹಾಟ್‌ನಲ್ಲಿ ವಾಯು ಮಾಲಿನ್ಯ ಹೆಚ್ಚಿದೆ. ಈ ನಗರವು ಮೇಘಾಲಯ ಹಾಗೂ ಅಸ್ಸಾಂನ ಗಡಿಯಲ್ಲಿದೆ. ಗುವಾಹಟಿಯಲ್ಲಿರುವ ಕೈಗಾರಿಕ ಪ್ರದೇಶಕ್ಕೆ ಬೊರ್ನಿಹಾಟ್‌ ಹತ್ತಿರದಲ್ಲಿದೆ. ಈ ನಗರದಲ್ಲಿನ ಜನರಿಗೆ ಈಗಾಗಲೇ ಶ್ವಾಸಕೋಶದ ರೋಗಗಳಿಂದ, ಕಾರ್ಖಾನೆಗಳ ಶಬ್ದದಿಂದ ನರಳಾಡುತ್ತಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ‌ಕೋನ್ರಡ್‌ ಕೆ. ಸಂಗ್ಮಾ ಅವರು ಪ್ರತಿಕ್ರಿಯಿಸಿದ್ದು, ಇದು ಅತ್ಯಂತ ಚಿಂತೆಗೀಡು ಮಾಡುವಂಥದ್ದು. ವಾಯು ಮಾಲಿನ್ಯ ತಡೆಗಟ್ಟಲು ತುರ್ತಿನ ಹಾಗೂ ದೀರ್ಘಾವಧಿ ಕ್ರಮಗಳನ್ನು ಕೈಗೊಳ್ಳಲಾಗುವುದು. ವಾಯು ವಾಲಿನ್ಯ ತಡೆಗಟ್ಟುವಲ್ಲಿ ಅಸ್ಸಾಂ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಆಧಾರ: ‘ದಿ ವರ್ಲ್ಡ್‌ ಏರ್‌ ಕ್ವಾಲಿಟಿ ರಿಪೋರ್ಟ್‌ 2024’, ಪಿಟಿಐ

ವಾಯು ಮಾಲಿನ್ಯ ಹರಡುವಲ್ಲಿ ವಾಹನ ಸಂಚಾರ ಕೂಡ ಪ್ರಮುಖ ಪಾತ್ರವಹಿಸುತ್ತವೆ. ಆದ್ದರಿಂದ, ಸಾರ್ವಜನಿಕ ಸಾರಿಗೆ ಅನುದಾನವೊಂದನ್ನು ರೂಪಿಸಬೇಕು. ಈ ಅನುದಾನದ ಮೂಲಕ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಬೇಕು. ಸಾರಿಗೆ ದರಗಳನ್ನು ರಿಯಾಯಿತಿಯಲ್ಲಿ ನೀಡಬೇಕು.
–ಅವಿನಾಶ್‌ ಚಾಂಚಲ್‌, ‘ಗ್ರೀನ್‌ಪೀಸ್‌’ ಸಂಸ್ಥೆಯ ದಕ್ಷಿಣ ಏಷ್ಯಾದ ಯೋಜನಾ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.