ADVERTISEMENT

ವಿಶ್ವದ ಹಿರಿಯಜ್ಜ ಜಾನ್‌ ಟಿನ್ನಿಸ್ವುಡ್ ನಿಧನ

ರಾಯಿಟರ್ಸ್
Published 27 ನವೆಂಬರ್ 2024, 4:34 IST
Last Updated 27 ನವೆಂಬರ್ 2024, 4:34 IST
<div class="paragraphs"><p>ಜಾನ್‌ ಟಿನ್ನಿಸ್ವುಡ್</p></div>

ಜಾನ್‌ ಟಿನ್ನಿಸ್ವುಡ್

   

ಚಿತ್ರಕೃಪೆ: ಗಿನ್ನಿಸ್ ವರ್ಲ್ಡ್‌ ರೆಕಾರ್ಡ್‌

ಲಿವರ್‌ಫೂಲ್‌(ಇಂಗ್ಲೆಂಡ್‌): ವಿಶ್ವದ ಅತಿ ಹಿರಿಯ ವ್ಯಕ್ತಿ ಇಂಗ್ಲೆಂಡ್‌ನ ಜಾನ್ ಟಿನ್ನಿಸ್ವುಡ್(112) ಸೋಮವಾರ ಮೃತಪಟ್ಟಿದ್ದಾರೆ.

ADVERTISEMENT

ಇಂಗ್ಲೆಂಡ್‌ನ ಲಿವರ್‌ಫೂಲ್‌ನಲ್ಲಿ 1912ರಲ್ಲಿ ಜನಿಸಿದ್ದ ಜಾನ್ ಅವರನ್ನು ಇದೇ ವರ್ಷ ಏಪ್ರಿಲ್‌ನಲ್ಲಿ ‘ವಿಶ್ವದ ಹಿರಿಯ ವ್ಯಕ್ತಿ’ ಎಂದು ಗುರುತಿಸಿ ಗಿನ್ನಿಸ್ ವರ್ಲ್ಡ್‌ ರೆಕಾರ್ಡ್‌ ಸಂಸ್ಥೆ ಘೋಷಿಸಿತ್ತು.

‘ವಾಯವ್ಯ ಇಂಗ್ಲೆಂಡ್‌ನ ಸೌತ್‌ಪೋರ್ಟ್‌ನಲ್ಲಿರುವ ಕೇರ್ ಹೋಮ್‌ನಲ್ಲಿ ಟಿನ್ನಿಸ್ವುಡ್ ಸೋಮವಾರ ನಿಧನರಾಗಿದ್ದಾರೆ’ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

‘ದೀರ್ಘಾಯುಷ್ಯವನ್ನು ಹೊಂದುವುದು ಅಥವಾ ಕಡಿಮೆ ಕಾಲ ಬದುಕುವುದು ಒಬ್ಬರ ಅದೃಷ್ಟದ ಮೇಲೆ ನಿಂತಿದೆ. ಈ ವಿಚಾರದಲ್ಲಿ ನಮಗೆ ಏನು ಮಾಡಲು ಸಾಧ್ಯವಿಲ್ಲ’ ಎಂದು ಸಂದರ್ಶವೊಂದರಲ್ಲಿ ಜಾನ್ ಹೇಳಿದ್ದರು.

ಟೈಟಾನಿಕ್ ಹಡಗು ದುರಂತ ನಡೆದ ವರ್ಷವೇ ಜನಿಸಿದ್ದ ಜಾನ್‌ ಅವರು ಎರಡು ಮಹಾಯುದ್ಧಗಳು ಮತ್ತು ಕೋವಿಡ್‌ನಂತಹ ಜಾಗತಿಕ ಸಾಂಕ್ರಾಮಿಕ ರೋಗದ ನಡುವೆಯು ಬದುಕುಳಿದು ವಿಶ್ವದ ಹಿರಿಯಜ್ಜ ಎನಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.