ADVERTISEMENT

ಹಿಜಾಬ್‌ ಧರಿಸದ ಇರಾನ್‌ ಕ್ರೀಡಾಪಟುವಿಗೆ ಬಂಧನ ಭೀತಿ: ವರದಿ

ಏಜೆನ್ಸೀಸ್
Published 18 ಅಕ್ಟೋಬರ್ 2022, 14:26 IST
Last Updated 18 ಅಕ್ಟೋಬರ್ 2022, 14:26 IST
ದಕ್ಷಿಣ ಕೊರಿಯಾದ ಸೋಲ್‌ನಲ್ಲಿ ನಡೆದ ಬೆಂಡೆ ಏರುವ ಸ್ಪರ್ಧೆಯಲ್ಲಿ ಹಿಜಾಬ್‌ ಧರಿಸದೆ ಪಾಲ್ಗೊಂಡ ಇರಾನ್‌ನ ಅಥ್ಲೀಟ್ ಎಲನಾಜ್‌ ರೆಕಬಿ –ಎಎಫ್‌ಪಿ ಚಿತ್ರ
ದಕ್ಷಿಣ ಕೊರಿಯಾದ ಸೋಲ್‌ನಲ್ಲಿ ನಡೆದ ಬೆಂಡೆ ಏರುವ ಸ್ಪರ್ಧೆಯಲ್ಲಿ ಹಿಜಾಬ್‌ ಧರಿಸದೆ ಪಾಲ್ಗೊಂಡ ಇರಾನ್‌ನ ಅಥ್ಲೀಟ್ ಎಲನಾಜ್‌ ರೆಕಬಿ –ಎಎಫ್‌ಪಿ ಚಿತ್ರ   

ಸೋಲ್‌: ದಕ್ಷಿಣ ಕೊರಿಯಾದ ರಾಜಧಾನಿ ಸೋಲ್‌ನಲ್ಲಿ ನಡೆದ ಗೋಡೆ ಏರುವ ಸ್ಪರ್ಧೆಯಲ್ಲಿ ಹಿಜಾಬ್‌ ಧರಿಸದೆ ಪಾಲ್ಗೊಂಡ ಇರಾನ್‌ನ ಅಥ್ಲೀಟ್‌ ಎಲೆನಾಜ್‌ ರೆಕಬಿ ಅವರು ಟೆಹರಾನ್‌ನತ್ತ ಹೊರಟಿದ್ದು, ಇರಾನ್‌ನಲ್ಲಿ ಅವರ ಬಂಧನ ಆಗುವ ಸಾಧ್ಯತೆ ಇದೆ ಎಂದು ಕೆಲವು ಮಾಧ್ಯಮಗಳು ಆತಂಕ ವ್ಯಕ್ತಪಡಿಸಿವೆ.

ಆದರೆ ಇರಾನ್‌ ಇಂತಹ ವರದಿಗಳಿಗೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಿದ್ದು, ರೆಕಬಿ ಕುರಿತು ಸುಳ್ಳು ಸುದ್ದಿಗಳು ಹರಡುಲಾಗುತ್ತಿದೆ ಎಂದು ಹೇಳಿದೆ. ಸೋಲ್‌ನಲ್ಲಿರುವ ಇರಾನ್‌ ರಾಯಭಾರ ಕಚೇರಿ ಈ ಪ್ರತಿಕ್ರಿಯೆ ನೀಡುವ ವೇಳೆ ಈ ಹಿಂದೆ ಹಿಜಾಬ್‌ ಧರಿಸಿ ರೆಕಬಿ ಅವರು ಸ್ಪರ್ಧೆಯಲ್ಲಿ ಪಾಲ್ಗೊಂಡ ಫೊಟೊವನ್ನು ಮಾತ್ರ ಲಗತ್ತಿಸಿದೆ.

ಇಂಟರ್‌ನ್ಯಾಷನಲ್‌ ಫೆಡರೇಷನ್ ಆಫ್‌ ಸ್ಪೋರ್ಟ್‌ ಕ್ಲೈಂಬಿಂಗ್‌ (ಐಎಫ್‌ಎಸ್‌ಸಿ) ಈ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.