ADVERTISEMENT

ಮೋಜು–ಮಸ್ತಿಯತ್ತ ಮುಖಮಾಡಿದ ವುಹಾನ್‌ ಜನ

ಕೊರೊನಾ ವೈರಸ್‌ ಹಾವಳಿಯಿಂದ ತತ್ತರ: ಲಾಕ್‌ಡೌನ್‌ ಮುಗಿದು ಸಹಜ ಸ್ಥಿತಿ

ಏಜೆನ್ಸೀಸ್
Published 19 ಆಗಸ್ಟ್ 2020, 7:58 IST
Last Updated 19 ಆಗಸ್ಟ್ 2020, 7:58 IST
ವುಹಾನ್‌ ನಗರದ ಅಮ್ಯೂಸ್‌ಮೆಂಟ್‌ ಪಾರ್ಕ್‌ವೊಂದರಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಜನರು ಪಾಲ್ಗೊಂಡಿದ್ದರು –ಎಎಫ್‌ಪಿ ಚಿತ್ರ
ವುಹಾನ್‌ ನಗರದ ಅಮ್ಯೂಸ್‌ಮೆಂಟ್‌ ಪಾರ್ಕ್‌ವೊಂದರಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಜನರು ಪಾಲ್ಗೊಂಡಿದ್ದರು –ಎಎಫ್‌ಪಿ ಚಿತ್ರ   

ಬೀಜಿಂಗ್‌:ಕೊರೊನಾ ವೈರಸ್‌ ಮೊದಲು ಕಾಣಿಸಿಕೊಂಡಿದ್ದ ಚೀನಾದ ವುಹಾನ್‌ ನಗರದಲ್ಲಿ ಜನಜೀವನ ಮತ್ತೆ ಸಹಜ ಸ್ಥಿತಿಯತ್ತ ಬಂದಿದೆ. ಅದರಲ್ಲೂ, ಲಾಕ್‌ಡೌನ್‌ನಿಂದ ರೋಸಿ ಹೋಗಿದ್ದ ಜನರು ಮನರಂಜನೆ, ಮೋಜು– ಮಸ್ತಿಯಲ್ಲಿ ಮುಳುಗಿದ್ದಾರೆ.ಅಮ್ಯೂಸ್‌ಮೆಂಟ್‌ ಪಾರ್ಕ್‌ಗಳು ಭರ್ತಿಯಾಗಿವೆ.

1 ಕೋಟಿಗೂ ಅಧಿಕ ಜನಸಂಖ್ಯೆ ಇರುವ ವುಹಾನ್‌, ಲಾಕ್‌ಡೌನ್‌ನಿಂದಾಗಿ ಸ್ತಬ್ಧವಾಗಿತ್ತು. ನಗರದಿಂದ ಯಾರೂ ಹೊರ ಹೋಗುವಂತಿಲ್ಲ. ನಗರಕ್ಕೆ ಇತರ ಕಡೆಗಳಿಂದಲೂ ನಿರ್ಬಂಧ ಹೇರಿದ್ದರಿಂದ ಜನರು ಸಾಕಷ್ಟು ತೊಂದರೆ ಅನುಭವಿಸಿದರು.

ಈಗ, ಅಲ್ಲೊಂದು–ಇಲ್ಲೊಂದು ಸೋಂಕಿನ ಪ್ರಕರಣಗಳು ವರದಿಯಾಗುತ್ತಿರುವುದನ್ನು ಹೊರತುಪಡಿಸಿದರೆ, ಕೋವಿಡ್‌ನ ಪ್ರಸರಣ ಬಹುತೇಕ ತಗ್ಗಿದೆ. ಇದು, ಜನರು ಮನೆಯಿಂದ ಹೊರ ಬಂದು ಸಂತೋಷಕೂಟಗಳಲ್ಲಿ, ಲಘುಪ್ರವಾಸ ಕೈಗೊಂಡು ಮೈಮನ ಹಗುರ ಮಾಡಿಕೊಳ್ಳಲು ಉತ್ತೇಜನ ನೀಡುತ್ತಿದೆ.

ADVERTISEMENT

ವುಹಾನ್‌ ಮಾಯಾ ಬೀಚ್‌ ವಾಟರ್‌ ಪಾರ್ಕ್‌ಜೂನ್‌ನಲ್ಲಿ ಪುನರಾರಂಭಗೊಂಡಿದ್ದರೂ, ಈಗ ಅದು ಜನರಿಂದ ತುಂಬಿ ತುಳುಕುತ್ತಿದೆ. ಶಾಂಘೈ ಮತ್ತು ಚಾಂಗ್‌ಕಿಂಗ್‌ ನಗರಗಳಲ್ಲಿರುವ ಪಾರ್ಕ್‌ನ ಶಾಖೆಗಳೂ ಈಗ ಭರ್ತಿ.

ಆನ್‌ಲೈನ್‌ ಮೂಲಕವೇ ಟಿಕೆಟ್‌ ಖರೀದಿ ಮಾಡಬೇಕು. ಪಾರ್ಕ್‌ ಪ್ರವೇಶಿಸುವ ಮುನ್ನ ಗುರುತಿನ ಚೀಟಿ ಜೊತೆ, ಗ್ರಾಹಕರ ಮೊಬೈಲ್‌ ಆ್ಯಪ್‌ವೊಂದರಲ್ಲಿ ‘ಗ್ರೀನ್‌ ಕೋಡ್‌’ ಕಾಣಿಸುತ್ತದೆ. ಇದು, ಆ ಗ್ರಾಹಕ ಕೊರೊನಾ ವೈರಸ್‌ ಸೋಂಕು ಹೊಂದಿದ್ದನೆ, ಕ್ವಾರಂಟೈನ್‌ಗೆ ಒಳಗಾಗಿದ್ದನೆ ಎಂಬ ಮಾಹಿತಿ ನೀಡುತ್ತದೆ. ಇದನ್ನು ಪರಿಶೀಲಿಸಿದ ನಂತರ ಪಾರ್ಕ್‌ ಒಳಗೆ ಪ್ರವೇಶ ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.