ADVERTISEMENT

153 ಯುದ್ಧ ಕೈದಿಗಳನ್ನು ಬಿಡುಗಡೆಗೊಳಿಸಿದ ಹೂಥಿ ಬಂಡುಕೋರರು

ಪಿಟಿಐ
Published 25 ಜನವರಿ 2025, 15:37 IST
Last Updated 25 ಜನವರಿ 2025, 15:37 IST
<div class="paragraphs"><p>ಯೆಮೆನ್‌ನ ಹೂಥಿ ಬಂಡುಕೋರರ ವಶದಲ್ಲಿದ್ದ 153 ಯುದ್ಧಕೈದಿಗಳನ್ನು ಶನಿವಾರ ಸನಾದಲ್ಲಿರುವ ಜೈಲಿನಿಂದ ಬಿಡುಗಡೆಗೊಳಿಸಲಾಯಿತು</p></div>

ಯೆಮೆನ್‌ನ ಹೂಥಿ ಬಂಡುಕೋರರ ವಶದಲ್ಲಿದ್ದ 153 ಯುದ್ಧಕೈದಿಗಳನ್ನು ಶನಿವಾರ ಸನಾದಲ್ಲಿರುವ ಜೈಲಿನಿಂದ ಬಿಡುಗಡೆಗೊಳಿಸಲಾಯಿತು

   

ದುಬೈ: ‘ಯೆಮನ್‌ನ ಹೂಥಿ ಬಂಡುಕೋರರು ಏಕಪಕ್ಷೀಯವಾಗಿ 153 ಯುದ್ಧ ಕೈದಿಗಳನ್ನು ಬಿಡುಗಡೆಗೊಳಿಸಿದ್ದಾರೆ’ ಎಂದು ರೆಡ್‌ಕ್ರಾಸ್‌ನ ಅಂತರರಾಷ್ಟ್ರೀಯ ಸಮಿತಿಯು ತಿಳಿಸಿದೆ. ಗಾಜಾ ಪಟ್ಟಿಯಲ್ಲಿ ಇಸ್ರೇಲ್‌– ಹಮಾಸ್‌ ಬಂಡುಕೋರರ ನಡುವೆ ಕದನ ವಿರಾಮ ಏರ್ಪಟ್ಟ ಬೆನ್ನಲ್ಲೇ, ಈ ಬೆಳವಣಿಗೆ ನಡೆದಿದೆ. 

ಯೆಮೆನ್‌ನಲ್ಲಿ ತಲೆದೋರಿರುವ ದೀರ್ಘಕಾಲದ ಯುದ್ಧವನ್ನು ಶಾಶ್ವತವಾಗಿ ಕೊನೆಗೊಳಿಸಿ, ಮಾತುಕತೆ ನಡೆಸುವ ನಿಟ್ಟಿನಲ್ಲಿ ಈ ಹಿಂದೆಯೂ ಕೂಡ ಹೂಥಿ ಸಂಘಟನೆಯು ಹಲವು ಯುದ್ಧ ಕೈದಿಗಳನ್ನು ಬಿಡುಗಡೆಗೊಳಿಸಿತ್ತು. 

ADVERTISEMENT

2014ರಿಂದಲೂ ಯೆಮೆನ್‌ನ ರಾಜಧಾನಿ ಸನಾ ನಗರ ಹೂಥಿ ಬಂಡುಕೋರರ ಹಿಡಿತದಲ್ಲಿದೆ.

‘ಬಂಡುಕೋರರನ್ನು ಬಿಡುಗಡೆಗೊಳಿಸುವ ನಿರ್ಧಾರ ಕೈಗೊಂಡಿರುವ ಮಾತುಕತೆಯ ಮತ್ತೊಂದು ಧನಾತ್ಮಕ ಹೆಜ್ಜೆಯಾಗಿದೆ’ ಎಂದು ರೆಡ್‌ಕ್ರಾಸ್‌ ಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.