ADVERTISEMENT

ಯೆಮೆನ್: ಅಮೆರಿಕ ವಾಯುದಾಳಿ, 4 ಸಾವು

ಏಜೆನ್ಸೀಸ್
Published 7 ಏಪ್ರಿಲ್ 2025, 15:33 IST
Last Updated 7 ಏಪ್ರಿಲ್ 2025, 15:33 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ದುಬೈ: ಯೆಮೆನ್‌ನ ಹೌತಿ ಬಂಡುಕೋರರ ಸುಪರ್ದಿಯಲ್ಲಿರುವ ಸನಾ ರಾಜಧಾನಿ ಮೇಲೆ ಅಮೆರಿಕ ನಡೆಸಿರುವ ವಾಯುದಾಳಿಯಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ.

ADVERTISEMENT

ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರೂ ಈ ಕುರಿತು ವಿಡಿಯೊ ಹಂಚಿಕೊಂಡಿದ್ದಾರೆ. ಅದರ ಪ್ರಕಾರ ಮೃತರ ಸಂಖ್ಯೆ ಹೆಚ್ಚಾಗಿರುವ ಸಾಧ್ಯತೆಗಳಿವೆ. 70–80 ಜನರಿದ್ದ ಸಮೂಹದ ಬಳಿ ಸ್ಫೋಟ ಸಂಭವಿಸಿದ್ದ ದೃಶ್ಯಗಳು ಟ್ರಂಪ್ ಹಂಚಿಕೊಂಡ ವಿಡಿಯೊದಲ್ಲಿದೆ. 

ಸೇನಾ ಅಧಿಕಾರಿಗಳಿಗೆ ಪೆಟ್ಟಾಗಿದೆ ಎಂಬುದನ್ನು ಇತ್ತ, ಹೌತಿ ನಿರಾಕರಿಸಿದೆ. ಮನೆ ಮೇಲೆ ದಾಳಿ ನಡೆದಿದ್ದು, 16 ಮಂದಿ ಗಾಯಗೊಂಡರು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.