ADVERTISEMENT

ಐಎಇಎ ನಿರ್ದೇಶಕ ಯುಕಿಯಾ ಅಮಾನೊ ನಿಧನ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 19:36 IST
Last Updated 22 ಜುಲೈ 2019, 19:36 IST
ಯುಕಿಯಾ ಅಮಾನೊ
ಯುಕಿಯಾ ಅಮಾನೊ   

ವಿಯನ್ನಾ (ಎಪಿ): ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ) ಮಹಾ ನಿರ್ದೇಶಕ ಯುಕಿಯಾ ಅಮಾನೊ (72) ಸೋಮವಾರ ನಿಧನರಾದರು.

ಸಾವಿನ ಕಾರಣವನ್ನು ‘ಐಎಇಎ’ ಸ್ಪಷ್ಟಪಡಿಸಿಲ್ಲ. ಆದರೆ, ಹುದ್ದೆಯಿಂದ ಕೆಳಗಿಳಿಯುವ ಕುರಿತು ಆಡಳಿತ ಮಂಡಳಿಗೆ ಈ ಮೊದಲು ಮಾಹಿತಿ ನೀಡಿದ್ದರು. ರಾಜೀನಾಮೆ ಕುರಿತು ಪತ್ರ ಸಿದ್ಧಪಡಿಸಿದ್ದರುಎಂದು ಸಂಸ್ಥೆ ಹೇಳಿದೆ.

ಪತ್ರದ ಕೆಲವು ಅಂಶಗಳನ್ನು ಮಾಧ್ಯಮಗಳಿಗೆ ಸಂಸ್ಥೆ ಬಿಡುಗಡೆ ಮಾಡಿದೆ. ಶಾಂತಿ ಮತ್ತು ಅಭಿವೃದ್ಧಿಗಾಗಿ ಪರಮಾಣು ಶಕ್ತಿ ಬಳಕೆ ಕುರಿತು ಸಂಸ್ಥೆ ತಳೆದ ನಿಲುವುಗಳನ್ನು ಅಮಾನೊ ಶ್ಲಾಘಿಸಿದ್ದಾರೆ ಎಂದು ತಿಳಿಸಿದೆ.

ADVERTISEMENT

ಜ‍ಪಾನ್‌ ರಾಜತಾಂತ್ರಿಕ ತಜ್ಞರಾಗಿದ್ದ ಅಮಾನೊ 2009ರಲ್ಲಿ ಐಎಇಎ ಸೇರಿದ್ದರು. ಇದಕ್ಕೂ ಮೊದಲುಜಪಾನ್‌ನ ವಿದೇಶಾಂಗ ಸಚಿವಾಲಯದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. 1995, 2000 ಮತ್ತು 2005ರ ಪರಮಾಣು ಪ್ರಸರಣ ನಿಷೇಧ ಒಪ್ಪಂದಕ್ಕೆ (ಎನ್‌ಎಸ್‌ಜಿ) ಅವರು ಕೊಡುಗೆ ನೀಡಿದ್ದರು. 2007ರ ಎನ್‌ಎಸ್‌ಜಿ ಒಪ್ಪಂದ ರಚನಾ ಸಭೆ ಮತ್ತು 2010ರ ಒಪ್ಪಂದ ಪರಾಮರ್ಶನಾ ಸಭೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.