ವಿಟ್ರಾ ಕಂಪೆನಿ ನೂತನ ಮಾದರಿಯ ಫಾಸೆಟ್ ಸರಣಿಯ ವಾಷ್ ಬೇಸಿನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಕಲಾತ್ಮಕವಾಗಿರುವ ಇದು ಮೆಟಲ್ ಕೋಟಿಂಗ್ ಹೊಂದಿದೆ ಎನ್ನುತ್ತದೆ ಕಂಪೆನಿ. ವೆಬ್ಸೈಟ್ http://www.vitra-india.com
*
ಹೊಸ ಫ್ಯಾನ್ ಪರಿಚಯ
ಲುಮಿನಸ್ ಎರಡು ಹೊಸ ಫ್ಯಾನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಡೆಲ್ಟಾಯಿಡ್ ಮತ್ತು ಟ್ರಿಗೋನ್ ಎಂಬ ಹೆಸರಿನ ಈ ಫ್ಯಾನ್ ನೋಡಲು ಆಕರ್ಷಕವಾಗಿದೆ. ಆಧುನಿಕ ನೋಟವನ್ನು ಹೊಂದಿದ್ದು, ಮನೆಯ ಅಂದವನ್ನು ಹೆಚ್ಚಿಸಲಿದೆಯಂತೆ. ಮ್ಯಾಗ್ನೆಟಿಕ್ ಗ್ರೇ, ಸಿಲ್ವರ್ ವೈಟ್ ಬಣ್ಣಗಳಲ್ಲಿದ್ದು, ಆರಂಭಿಕ ಬೆಲೆ ₹2990.
*
ವಾಹನ ತೊಳೆಯಲು ಸ್ಪ್ರೆ
ವಿಸ್ತಾ ಸಂಸ್ಥೆ ವಾಹನ ತೊಳೆಯಲು ಡ್ರೈಕ್ಲೀನ್ ಸ್ಪ್ರೇ ಒಂದನ್ನು ಪರಿಚಯಿಸಿದೆ. ಇದನ್ನು ಕಾರಿಗೆ ಸ್ಪ್ರೇ ಮಾಡಿ ಮೈಕ್ರೊಫೈಬರ್ ಬಟ್ಟೆಯಿಂದ ಒರೆಸಬೇಕು. ‘ನೀರಿನ ಸಮಸ್ಯೆ ಹೆಚ್ಚುತ್ತಿರುವುದರಿಂದ ಇದನ್ನು ಪರಿಚಯಿಸಿದ್ದೇವೆ. ಇದು ವಾಹನಗಳಿಗೆ ಹೊಳಪು ನೀಡಲಿದೆ’ ಎನ್ನುತ್ತದೆ ಕಂಪೆನಿ. ಬೆಲೆ ₹225.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.