ಬಹುತೇಕ ಡೆವಲಪರ್‌ಗಳು ಮನೆ ಖರೀದಿ ಮಾಡುವ ಗ್ರಾಹಕರಿಗೆ ಆಕರ್ಷಕ ವಿನ್ಯಾಸದ ಮನೆ, ಅಪಾರ್ಟ್‌ಮೆಂಟ್, ಸುಸಜ್ಜಿತ ಜಿಮ್, ಪೂಲ್, ಟೆನಿಸ್ ಕೋರ್ಟ್, ಚಿತ್ರಮಂದಿರ ಹೀಗೆ ಹತ್ತು ಹಲವು ಸೌಲಭ್ಯ ಕಲ್ಪಿಸಿಕೊಡುವ ಬಗೆಗೆ ಚಿಂತಿಸುತ್ತಾರೆ. ಆದರೆ ಗೋದ್ರೇಜ್ ಪ್ರಾಪರ್ಟೀಸ್ ಲಿಮಿಟೆಡ್ ಸುಸಜ್ಜಿತ ಗ್ರಂಥಾಲಯವನ್ನು ಅಭಿವೃದ್ಧಿಪಡಿಸುವ ಯೋಜನೆ ಹಾಕಿಕೊಂಡಿದೆ. ಕಂಪೆನಿಯ ಹೆಬ್ಬಾಳ ಪ್ರಾಜೆಕ್ಟ್‌ನ ವಸತಿ ಸಮುಚ್ಚಯದಲ್ಲಿ ಗ್ರಂಥಾಲಯವನ್ನು ಆರಂಭಿಸಲಿದೆ. ಈ ಯೋಜನೆಗೆ ಜಸ್ಟ್‌ಬುಕ್ಸ್ ಸಲ್ಯೂಶನ್ಸ್ ಸಹಕಾರ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.