ADVERTISEMENT

ಮುಕ್ತಿ ಯಾವಾಗ?

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 19:30 IST
Last Updated 18 ಜನವರಿ 2017, 19:30 IST

ಎಲ್ಲ ಖಾತೆದಾರರಿಂದ ಕಡ್ಡಾಯವಾಗಿ ಪ್ಯಾನ್‌ ಕಾರ್ಡ್‌ ವಿವರ ಪಡೆಯುವಂತೆ ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು ಬ್ಯಾಂಕ್‌ಗಳಿಗೆ ಸೂಚಿಸಿರುವುದು ಸ್ವಾಗತಾರ್ಹ. ಇದರಿಂದ ಕಾಳಧನಿಕರು ಮತ್ತು ತೆರಿಗೆ ವಂಚಕರಿಗೆ ಮತ್ತೊಮ್ಮೆ ತೀವ್ರ ಹೊಡೆತ ಬೀಳಲಿದೆ.

ಇದರಿಂದ ಶೂನ್ಯ ಠೇವಣಿ ಉಳಿತಾಯ ಖಾತೆದಾರರಿಗೆ ವಿನಾಯಿತಿ ನೀಡಿದ್ದರೂ ಮುಂದೆ ಅವಶ್ಯಕತೆ ಬರಬಹುದೆಂದು ಮನಗಂಡು ಎಲ್ಲೆಡೆ ಜನ ಪ್ಯಾನ್‌ ಕಾರ್ಡ್‌ಗಳನ್ನು ಮಾಡಿಸುತ್ತಿದ್ದಾರೆ. ಆದರೆ ಇದನ್ನೇ ನೆಪ ಮಾಡಿಕೊಂಡು ದಲ್ಲಾಳಿಗಳು ಹುಟ್ಟಿಕೊಂಡಿದ್ದಾರೆ. ಪ್ಯಾನ್‌  ಕಾರ್ಡ್ ಮಾಡಿಸಿಕೊಡುವುದಾಗಿ ಅಮಾಯಕರನ್ನು ನಂಬಿಸಿ ಹಣ ಪಡೆದು ವಂಚಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಸರ್ಕಾರ ನೋಂದಣಿ ಕೇಂದ್ರಗಳನ್ನು ಸ್ಥಾಪಿಸಬೇಕು. ವಂಚಕರ ವಿರುದ್ಧ ಅಧಿಕಾರಿಗಳು ಕ್ರಮ ಜರುಗಿಸಬೇಕು.
-ರಘು. ಕೆ.ಜಿ.,ಅಜ್ಜಂಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.