ADVERTISEMENT

ಫೀವರ್ ಕ್ಲಿನಿಕ್‌ಗಳ ಮಹತ್ವ

ಡಾ.ಸ್ಮಿತಾ ಜೆ ಡಿ
Published 26 ಮೇ 2020, 20:58 IST
Last Updated 26 ಮೇ 2020, 20:58 IST
ಬೆಂಗಳೂರಿನ ಫೀವರ್ ಕ್ಲಿನಿಕ್‌ನಲ್ಲಿ ಆರೋಗ್ಯ ತಪಾಸಣೆ
ಬೆಂಗಳೂರಿನ ಫೀವರ್ ಕ್ಲಿನಿಕ್‌ನಲ್ಲಿ ಆರೋಗ್ಯ ತಪಾಸಣೆ   

ನೋವೆಲ್ ಕೊರೊನಾ ವೈರಾಣುವಿನ ಸೋಂಕನ್ನು ಹರಡದಂತೆ ತಡೆಗಟ್ಟಲು ಪ್ರಪಂಚಾದ್ಯಂತಹಲವು ದೇಶಗಳು ಹರಸಾಹಸ ಮಾಡುತ್ತಿವೆ. ಅಧ್ಯಯನಗಳ ಪ್ರಕಾರ ಕೊರೊನಾ ವೈರಾಣುವಿನ ಹತ್ತು ತಳಿಗಳನ್ನು ಕಂಡುಹಿಡಿಯಲಾಗಿದೆ. ಭಾರತದ ಶೇ 47.5 ಕೊರೊನಾ ಸೋಂಕಿತರಲ್ಲಿ ಕಂಡುಬಂದಿರುವ ತಳಿಯೆಂದರೆ 'A2a'.

ಬೇರೆ ಎಲ್ಲಾ ದೇಶಗಳಿಗೆ ಹೋಲಿಸಿದರೆ ಭಾರತವು ಈ ಸನ್ನಿವೇಶವನ್ನು ಬಹಳ ದಕ್ಷವಾಗಿ ನಿಭಾಯಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಆಸ್ಪತ್ರೆಗಳ ಹಾಗೂ ಆರೋಗ್ಯ ಸೇವೆಗಳ ದಕ್ಷ ಯೋಜನೆಗಳು ಹಾಗೂ ಭಾರತದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ. ಹಳ್ಳಿಹಳ್ಳಿಗಳಲ್ಲಿ ನೆಲೆಯಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಸಾರ್ವಜನಿಕ ಆಸ್ಪತ್ರೆಗಳು ಹಾಗೂ ಜಿಲ್ಲಾ ಆಸ್ಪತ್ರೆಗಳು. ವಿಶ್ವದ ಕೆಲವುಮುಂದುವರಿದ ದೇಶಗಳಲ್ಲಿ ಲಭ್ಯವಿರುವ ಆಧುನಿಕ ಚಿಕಿತ್ಸಾ ಕ್ರಮಗಳು ನಮ್ಮಲ್ಲಿ ಕಡಿಮೆಯಿದ್ದರೂ ಸಾಂಕ್ರಾಮಿಕ ರೋಗಗಳನ್ನುನಿಭಾಯಿಸುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಮುಖ್ಯ ಕಾರಣ ಸಾರ್ವಜನಿಕ ಆರೋಗ್ಯ ವ್ಯವಸ್ಥೆ.

ಫೀವರ್ ಕ್ಲಿನಿಕ್‌ನ ಮಹತ್ವ

ADVERTISEMENT

ಕೋವಿಡ್-19 ಸಮುದಾಯದಲ್ಲಿ ಕಾಡ್ಗಿಚ್ಚಿನಂತೆ ಹರಡುವ ಸೊಂಕು ಎಂದು ಮನಗಂಡ ಸರ್ಕಾರವು ಸೋಂಕಿತ ವ್ಯಕ್ತಿಗಳನ್ನು ಆದಷ್ಟು ಬೇಗನೆ ಸಾಮಾನ್ಯ ಜನರಿಂದ ಬೇರ್ಪಡಿಸುವಮಾರ್ಗವಾಗಿ ಫೀವರ್ ಕ್ಲಿನಿಕ್‌ಗಳ ಮೊರೆ ಹೋಯಿತು. ಫೀವರ್ ಕ್ಲಿನಿಕ್‌ಗಳು ಪ್ರಾಮುಖ್ಯತೆಯನ್ನು ಹೀಗೆ ವಿವರಿಸಬಹುದು.

* ತುರ್ತು ಪರಿಸ್ಥಿತಿಗಳನ್ನು ಕಡಿಮೆ ಮಾಡಲು ಏಕೈಕ ಮಾರ್ಗ ಫೀವರ್ ಕ್ಲಿನಿಕ್‌ಗಳು.

* ತಕ್ಷಣವೇ ಕೋವಿಡ್-19 ಸೋಂಕಿತ ವ್ಯಕ್ತಿಗಳನ್ನು ಪ್ರತ್ಯೇಕಿಸಲು.

* ಚಿಕಿತ್ಸೆಯ ಸರದಿಯನ್ನು ನಿರ್ಧಾರ ಮಾಡಲು (Triage System).

* ಕೋವಿಡ್-19ಶಂಕಿಸಲಾದ ವ್ಯಕ್ತಿಗಳನ್ನು ಪರೀಕ್ಷೆಗೆ ಒಳಪಡಿಸಲು.

* ಕೋವಿಡ್-19 ಸೋಂಕಿತ ವ್ಯಕ್ತಿಗಳ ಪ್ರಥಮ ಸಂಪರ್ಕ ಹಾಗೂ ದ್ವಿತೀಯ ಸಂಪರ್ಕಗಳನ್ನು ಪ್ರತ್ಯೇಕಿಸಲು.

ಮಾರ್ಗಸೂಚಿಗಳು

ಫೀವರ್ ಕ್ಲಿನಿಕ್‌ಗಳನ್ನು ಸ್ಥಾಪಿಸಲು ಸರ್ಕಾರವು ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ...

* ಗಾಳಿ, ಬೆಳಕು ಹೇರಳವಾಗಿ ಇರುವ ಸ್ಥಳಗಳಲ್ಲಿ ಸ್ಥಾಪಿಸಬೇಕಿದೆ.

* ರೋಗಿಗಳು ನೇರವಾಗಿ ಫೀವರ್ ಕ್ಲಿನಿಕ್‌ಗಳನ್ನು ಸಂಪರ್ಕಿಸಬಹುದಾದಸ್ಥಳಗಳಲ್ಲಿ ಸ್ಥಾಪಿಸಬೇಕಾಗಿದೆ.

* ಫೀವರ್ ಕ್ಲಿನಿಕ್‌ಗೆ ಬರುವ ರೋಗಿಗಳನ್ನು ಸಾಮಾನ್ಯ ರೋಗಿಗಳೊಂದಿಗೆ ಬೆರೆಯದಂತೆ ನಿಗಾವಹಿಸಬೇಕಾಗಿದೆ.

ಫೀವರ್ ಕ್ಲಿನಿಕ್‌ನ ಪ್ರದೇಶಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ.

ಸ್ವಾಗತ ಕೇಂದ್ರ,ಕಾಯುವ ಪ್ರದೇಶ, ಸ್ಕ್ರೀನಿಂಗ್ಪ್ರದೇಶ.

ಬಂದ ಎಲ್ಲಾ ರೋಗಿಗಳಿಗೆ ಕೈಗೆ ಸ್ಯಾನಿಟೈಸರ್,ಮಾಸ್ಕ್‌ಗಳನ್ನುಹಾಗೂ ಕೋವಿಡ್-19ರ ಬಗ್ಗೆ ಮಾಹಿತಿ ಇರುವ ಕೈ ಚೀಟಿಯನ್ನು ಕೊಡಲಾಗುತ್ತದೆ. ರೋಗಿಗಳು ಅಂತರವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಶಾರೀರಿಕ ತಾಪಮಾನವನ್ನು ಥರ್ಮಲ್ ಡಿಟೆಕ್ಟರ್‌ಗಳ ಮೂಲಕ ಕಂಡುಹಿಡಿಯಲಾಗುವುದು. ನಂತರ ವೈದ್ಯರಿಂದ ರೋಗಿಯ ಸಂಪರ್ಕರಹಿತ ತಪಾಸಣೆಯಾಗುತ್ತದೆ. ಅವಶ್ಯಕತೆ ಇದ್ದಲ್ಲಿ ಮಾತ್ರ ವೈಯಕ್ತಿಕ ರಕ್ಷಣಾ ಪರಿಕರಗಳೊಂದಿಗೆ ರೋಗಿಯ ತಪಾಸಣೆ ಮಾಡಲಾಗುತ್ತದೆ.

ಅನುಮಾನಾಸ್ಪದ ರೋಗಿಗಳಲ್ಲಿ ಗಂಟಲು ಅಥವಾ ಮೂಗಿನ ಸ್ವಾಬ್‌ಗಳನ್ನುತೆಗೆದು ಕೋವಿಡ್ ಟೆಸ್ಟಿಂಗ್ ಮಾಡಲಾಗುತ್ತದೆ.

ಕೋವಿಡ್-19 ಸೋಂಕಿತ ವ್ಯಕ್ತಿಗಳನ್ನು ಕಂಡುಹಿಡಿದು ಲಕ್ಷಣಗಳ ತೀವ್ರತೆಯ ಆಧಾರದ ಮೇಲೆ ಚಿಕಿತ್ಸೆಯ ಸರದಿಯನ್ನು ನಿರ್ಧಾರ ಮಾಡುವುದುಫೀವರ್ ಕ್ಲಿನಿಕ್‌ಗಳ ಮುಖ್ಯ ಉದ್ದೇಶವಾಗಿದೆ.

ಸ್ವಾಬ್‌ಗಳನ್ನು ಟೆಸ್ಟಿಂಗ್‌ಗಳಿಗೆ ಕಳುಹಿಸಿದ ವ್ಯಕ್ತಿಗಳನ್ನು ಪರೀಕ್ಷಾ ಫಲಿತಾಂಶಗಳು ಬರುವ ತನಕ ಸ್ವಯಂ ಪ್ರತ್ಯೇಕಿಸಿಕೊಳ್ಳಲು ಮನವಿ ಮಾಡಲಾಗುತ್ತದೆ.

ಕೋವಿಡ್-19 ಸೋಂಕು ಖಚಿತವಾದ ವ್ಯಕ್ತಿಗಳನ್ನು ಪ್ರತ್ಯೇಕಿಸಿ ಸೋಂಕಿನ ಲಕ್ಷಣಗಳ ತೀವ್ರತೆಯ ಆಧಾರದ ಮೇಲೆ ಚಿಕಿತ್ಸೆಯ ಆದ್ಯತೆ ನಿರ್ಧರಿಸಲಾಗುವುದು.ಲಕ್ಷಣಗಳು ಸೌಮ್ಯವಿದ್ದಲ್ಲಿ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ನೀಡಲಾಗುವುದು. ಲಕ್ಷಣಗಳು ಮಧ್ಯಮ ಇದ್ದಲ್ಲಿ ಮೀಸಲಾದ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುವುದು.

ತೀವ್ರತರ ರೋಗಲಕ್ಷಣಗಳಿದ್ದರೆ ಮೀಸಲಾದ, ಐಸಿಯು ಹಾಗೂ ವೆಂಟಿಲೇಟರ್‌ಗಳ ವ್ಯವಸ್ಥೆ ಇರುವ ಮೀಸಲುಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುವುದು.

ಸರ್ಕಾರವು ಕೆಲವು ಜಿಲ್ಲೆಗಳಲ್ಲಿ ಮೊಬೈಲ್ ಜ್ವರ ಕ್ಲಿನಿಕ್‌ಗಳು, ಟೆಲಿಮೆಡಿಸನ್ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ. ಸಾರ್ವಜನಿಕರು ಇವುಗಳ ಸಂಪೂರ್ಣ ಉಪಯೋಗಗಳನ್ನು ಪಡೆಯಬೇಕಾಗಿದೆ. ಸರ್ಕಾರವು ವಿಧಿಸುವ ನಿಯಮಗಳನ್ನು ಅನುಸರಿಸುವುದು ಜನರ ಆದ್ಯ ಕರ್ತವ್ಯ.ಕೋವಿಡ್-19ರ ವಿರುದ್ಧದಯುದ್ಧವನ್ನು ಗೆಲ್ಲಲು ನಾವೆಲ್ಲರೂ ಸರ್ಕಾರದೊಂದಿಗೆ ಕೈ ಜೋಡಿಸಬೇಕಾಗಿದೆ.

ಲೇಖಕರು: ದಂತ ವೈದ್ಯಾಧಿಕಾರಿ, ಗುಂಡ್ಲುಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.