ADVERTISEMENT

ಮೊಟ್ಟೆ ನಮ್ಮದಲ್ಲ!

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2022, 19:30 IST
Last Updated 21 ಆಗಸ್ಟ್ 2022, 19:30 IST
ಚುರುಮುರಿ
ಚುರುಮುರಿ   

ಬೆಕ್ಕಣ್ಣ ಬೆಳಗ್ಗೆಯೇ ಮೊಬೈಲು ಹಿಡಿದು ಕಮಲಕ್ಕನ ಮನೆ ಕೋಳಿಗಳಿಗೆ ಕರೆ ಮಾಡಿ ವಿಚಾರಣೆಯಲ್ಲಿ ತೊಡಗಿತ್ತು.

‘ಏನವ್ವಾ... ಸಿದ್ದಣ್ಣನ ಮ್ಯಾಗೆ ಎಸೆದ ಮೊಟ್ಟೆ ನಿಮ್ಮ ಕೋಳಿಗೂಡಿನದಂತೆ...’

ಬೆಕ್ಕಣ್ಣನ ಮಾತು ಮುಗಿಯುವ ಮೊದಲೇ ಕಮಲಕ್ಕನ ಮನೆ ಕೋಳಿಗಳ ಕೊಕ್ಕೋಕ್ಕೋ ಅಳು ಕೇಳಿತು.

ADVERTISEMENT

‘ಇಲ್ಲ ಬೆಕ್ಕಣ್ಣ, ಆ ಮೊಟ್ಟೆ ನಮ್ಮ ಗೂಡಿಂ ದಲ್ಲ... ಕೈಮನೆಯವ್ರ ಕೋಳಿ ಗೂಡಿದಂಲೇ ಎತ್ತಿಕೊಂಡು, ಅವರ ಕಡೆಯವರೇ ಯಾರೋ ಬೇಕಂತಲೇ ಸಿದ್ದಣ್ಣನ ಮ್ಯಾಗೆ ಬಿಸಾಕವ್ರೆ’.

ಬೆಕ್ಕಣ್ಣನ ಮುಂದಿನ ಕರೆ ಕೈಮನೆಯ ಕೋಳಿಗಳಿಗೆ.

‘ಆಣೆ ಮಾಡಿ ಹೇಳ್ತೀವಿ, ಆ ಮೊಟ್ಟೆ ನಮ್ಮ ಗೂಡಿಂದಲ್ಲ. ಅದು ಕಮಲಕ್ಕನ ಮನೆ ಕೋಳಿ ಗೂಡಿಂದೇ. ನಮ್ ಕೋಳಿಗೂಡಿನ ಮೊಟ್ಟೇನ ನಮ್ ಸಿದ್ದಣ್ಣಂಗೆ ತಿನ್ನಾಕೆ ಕೊಡ್ತೀವೇ ಹೊರತು ಮೈಮ್ಯಾಗೆ ಬಿಸಾಕಾಕೆ ಯಾಕೆ ಕೊಡ್ತೀವಿ?’ ಕೈಮನೆಯ ಕೋಳಿಗಳು ವದರಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.