ADVERTISEMENT

ಚುರುಮುರಿ | ವರ್ಷಾಂತ್ಯದ ಕಚಗುಳಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2022, 22:00 IST
Last Updated 23 ಡಿಸೆಂಬರ್ 2022, 22:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಇದೇನೆ? ಮತ್ತೆ ಬಂದೆ ಅಂತ ಕೋವಿಡ್ವಕ್ರಿಸಿಕೊಳ್ತಿದೆ! ಮಾಸ್ಕ್ ಧರಿಸಿ, ರಿಸ್ಕ್ ಸರಿಸಿ ಅಂತ ಪಲ್ಲವಿ ಶುರುವಾಯ್ತು’ ಅತ್ತೆ ಪೇಪರ್ ಮೇಲೆ ಕಣ್ಣಾಡಿಸಿ ಕಳವಳಗೊಂಡರು.

‘ಈ ಚಳಿಗೂ ಬೆಚ್ಚಗಿರುತ್ತೆ ಪ್ಲಸ್ ಪ್ರೊಟೆಕ್ಷನ್ ಫ್ರಮ್ ಕೊರೊನಾ, ಹೊಸ ಮಾಸ್ಕ್, ನಾಲ್ಕೈದು ವೆರೈಟಿದು ತೊಗೋಬೇಕು, ನಿನ್ನ ನಂಬರ್‌ಗೆ ಬರೋ ಒಟಿಪಿ ಕೊಟ್ಟರೆ ಸಾಕು’ ಪುಟ್ಟಿ ನನ್ನ ಕಡೆ ನೋಡಿದಳು.

‘ನೀನು ಮಹಾಜಾಣೆ, ಆನ್‌ಲೈನ್ ಖರೀದಿ ಬರೀ ಮಾಸ್ಕ್‌ಗೆ ನಿಲ್ಲೋಲ್ಲ ಅಂತ ಗೊತ್ತು’ ನನ್ನವಳು ಮಗಳ ಕಿವಿ ಹಿಂಡಿದಳು.

ADVERTISEMENT

‘ವಿಂಟರ್ ಕಲೆಕ್ಷನ್‌ನಲ್ಲಿ ನಿನಗೆ ಟ್ರೆಂಡಿ ಸ್ವೆಟರ್, ಅಜ್ಜಿಗೆ ಶಾಲ್, ಕಾರ್ಟ್‌ನಲ್ಲಿ ಹಾಕಿದ್ದೀನಿ, ನೋಡಮ್ಮ’ ಎನ್ನುತ್ತಾ ಮೊಬೈಲ್ ತೋರಿಸಿದಳು.

‘ಅದಕ್ಕೇ ಜಾಣೆ ಅಂದದ್ದು’ ಅತ್ತೆಯೂ ಮುಖವರಳಿಸಿದರು.

ವಾಕ್ ಮುಗಿಸಿ ನೇರ ನಮ್ಮ ಮನೆಗೇ ಬಂದಿಳಿದ ಕಂಠಿ ‘ಎಷ್ಟುಬೇಗ 2022 ಮುಗೀತಿದೆ, ನೋಡ್ತಾ ನೋಡ್ತಾ 2023 ಬಂದಿರುತ್ತೆ, ಇದು ನಿಮಗೇ...’ ಎನ್ನುತ್ತಾ ಗಿಫ್ಟ್ ಬಾಕ್ಸ್ ಕೊಟ್ಟ.

‘ಏನು ವಿಶೇಷ?’ ಕೇಳಿದೆ.

‘ಗಂಡ್‌ ಮಕ್ಳೇ ಸ್ಟ್ರಾಂಗು ಗುರು’ ಬೀಗಿದ.

‘ಹೌದು, ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ, ಕ್ರಿಕೆಟ್‌ನಲ್ಲಿ ವಿರಾಟ್, ಪಾಂಡ್ಯ ...’ ನನ್ನ ಲಿಸ್ಟ್ ಮುಂದುವರಿಯುತ್ತಿತ್ತು.

‘ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್‌ಗೆ ಪಿ.ಟಿ.ಉಷಾ ಅಧ್ಯಕ್ಷರು ಅನ್ನೋದು ನೆನಪಿರಲಿ...’ ಹೆಣ್ಮಕ್ಕಳ ಪರ ಅತ್ತೆ ನಿಂತರು.

‘ನಾ ಹೇಳಿದ್ದು ಅದಲ್ಲ, ಐಐಎಂನ
ಸಾಮಾನ್ಯ ದಾಖಲಾತಿ ಪರೀಕ್ಷೇಲಿ ಈ ಬಾರಿ ಪುರುಷ ಅಭ್ಯರ್ಥಿಗಳದ್ದೇ ಮೇಲುಗೈ, ಬಾಸ್ ಭಾವಮೈದುನನ ಯಶಸ್ಸು, ಅದರ ಜೊತೆ ವರ್ಷಾಂತ್ಯದ ಆಚರಣೆ ಸಲುವಾಗಿ ಆಫೀಸಲ್ಲಿ ಗಿಫ್ಟ್ಸ್ ಕೊಟ್ರು’ ಕಂಠಿ ಕ್ಲಾರಿಫೈ ಮಾಡಿದ.

‘ಈ ವರ್ಷ ಆಸ್ಕರ್‌ಗೆ ನಾಲ್ಕು ಚಿತ್ರಗಳು ಅಂತಿಮ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿವೆ, ವರ್ಷಾಂತ್ಯ
ಕ್ಕೊಂದು ಸಂತೋಷದ ವಿಷಯ ಅಲ್ವೇ?’ ಅತ್ತೆ ದಿಢೀರ್ ಅಂತ ಸಿನಿಮಾ ಸುದ್ದಿ ಕೊಟ್ಟರು.

‘ಒಟಿಪಿ ಬಂದಿರ್ಬೇಕು ನೋಡಿ’ ಎನ್ನುತ್ತ ನನ್ನವಳು ಬಿಸಿ ಬಿಸಿ ಕಾಫಿ ತಂದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.