ADVERTISEMENT

ಚುರುಮುರಿ: ಯಾಗ-ಯೋಗ!

ಬಿ.ಎನ್.ಮಲ್ಲೇಶ್
Published 11 ಜುಲೈ 2025, 0:04 IST
Last Updated 11 ಜುಲೈ 2025, 0:04 IST
<div class="paragraphs"><p>ಚುರುಮುರಿ: ಯಾಗ-ಯೋಗ!</p></div>

ಚುರುಮುರಿ: ಯಾಗ-ಯೋಗ!

   

‘ಮಂಜಮ್ಮ, ಈ ಚಂಡಿಕಾ ಯಾಗ ಅಂದ್ರೆ ಏನದು? ಮೊನ್ನೆ ನಮ್ ಹೋಂ ಮಿನಿಸ್ಟ್ರು ಸಾಹೇಬ್ರು ಮಾಡಿಸಿದ್ರಂತೆ...’ ಹರಟೆಕಟ್ಟೆಯಲ್ಲಿ ದುಬ್ಬೀರ ಕೇಳಿದ.

‘ಅದಾ.‌.. ನಮ್ ಮನಸಲ್ಲಿ ಏನರೆ ಆಸೆ ಇದ್ರೆ,
ಅದ್ನ ಈಡೇರಿಸ್ಕೊಳ್ಳೋಕೆ ಮಾಡ್ಸೋ ಯಾಗ
ಅನ್ಸುತ್ತೆ...’ ಮಂಜಮ್ಮ ಎಲ್ಲರಿಗೂ ಚಾ ಕೊಡುತ್ತ
ಹೇಳಿದಳು.

ADVERTISEMENT

‘ಕುರ್ಚಿ ಆಸೆ ಇದ್ರೆ ಅದ್ಕೆ ಹೈಕಮಾಂಡ್ ಸಂತೃಪ್ತಿ ಯಾಗ, ಅಡ್ಡಿ ಮಾಡೋರಿಗೆ ಶತ್ರು ಸಂಹಾರ ಯಾಗ ಮಾಡಿಸ್ಬೇಕು. ನಮ್ ಹೊಳೆನರಸೀಪುರದ ನಿಂಬೆಹಣ್ಣು ತಂತ್ರವಾದಿಗಳಿಗೆ ಕೇಳಿದ್ರೆ ಹೇಳ್ತಿದ್ರಪ...’ ಗುಡ್ಡೆ ನಕ್ಕ.

‘ಈಗ ನಿಂಬೆಹಣ್ಣು ಪವರ್ ಕಳ್ಕಂಡಿದೆ ಕಣಲೆ, ಅದಿರ್ಲಿ, ಈ ಬಾಯಿಗೆ ಬಂದಂಗೆ ಮಾತಾಡೋರಿಗೆ ಶಾಶ್ವತ ಶ್ರವಣ ನಾಶ ಯಾಗ ಮಾಡ್ಸಿದ್ರೆ ಹೆಂಗೆ?’ ತೆಪರೇಸಿ ಕೇಳಿದ.

‘ಶ್ರವಣ ನಾಶ ಯಾಗನಾ? ಯಾಕೆ?’

‘ಕಿವಿ ಕೇಳಿದ್ರೆ ತಾನೆ ಅವರು ಮಾತಾಡೋದು?’

‘ಕರೆಕ್ಟ್, ಆಮೇಲೆ ಈ ಚಂಡಿಕಾ ಯಾಗದ ತರ ‘ಮಂಡಿ’ಕಾ ಯಾಗ ಅಂತಾನೂ ಇದ್ಯಾ?’ ಗುಡ್ಡೆ ಕೇಳಿದ.

‘ಇರಬೋದೇನಪ, ಮೋಸ್ಟ್ ಲೀ ಅದನ್ನ ಮಂಡಿ ನೋವು ಇರೋರು ಮಾಡಿಸ್ಬೋದು...’ 

‘ನಮ್ ಕುಮಾರಣ್ಣ ಯಾವ ಯಾಗ ಮಾಡಿಸ್ಬೋದು?’ ಕೊಟ್ರೇಶಿ ಕೊಕ್ಕೆ.

‘ಅವ್ರು ಮಗನಿಗಾಗಿ ‘ಮಂಡ್ಯ’ ಕಾ ಯಾಗ ಮಾಡಿಸ್ಬೋದು...’ ಗುಡ್ಡೆ ಕಿಸಕ್ಕೆಂದ.

‘ಅದಿರ್ಲಿ, ನಮ್ ಬಂಡೆ ಸಾಹೇಬ್ರು ಮೊನ್ನೆ ಈಡುಗಾಯಿ ಹಿಡ್ಕಂಡು ಆಕಾಶ ನೋಡ್ತಿದ್ರಲ್ಲ, ಅಲ್ಲಿ ಏನು ಕಂಡಿರಬೋದು?’ ಮಂಜಮ್ಮ ಕೇಳಿದಳು.

‘ಇನ್ನೇನು ಡೆಲ್ಲಿ ಕಂಡಿರುತ್ತೆ, ಸಿಂಹಾಸನ ನೆನೆಸ್ಕಂಡು ಈಡುಗಾಯಿ ಒಡೆದಿರ್ತಾರೆ...’ 

‘ಬರೀ ಈಡುಗಾಯಿ ಒಡೆದ್ರೆ ಆಗಲ್ಲ, ಅದ್ಕೆ ಸಿಂಹಾಸನ ಪ್ರಾಪ್ತಿ ಯಾಗ ಮಾಡಿಸ್ಬೇಕು..?’ ದುಬ್ಬೀರನ ಸಲಹೆ.

‘ಅದ್ಕೂ ಸಿಂಹಾಸನದ ಯೋಗ ಪ್ರಾಪ್ತಿ ಆಗದಿದ್ರೆ?’

‘ಕೊನಿಗೆ ಬಾಗಿಲು ಒದೆಯೋ ಯಾಗ ಇದ್ದೇ ಐತಲ್ಲ...’ ಎಂದ ಗುಡ್ಡೆ. ಎಲ್ಲರೂ ಗೊಳ್ಳಂತ ನಕ್ಕರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.