ADVERTISEMENT

ಪ್ರಜಾವಾಣಿ ಪಾಡ್‌ಕಾಸ್ಟ್‌: ವಚನವಾಣಿಗೆ 200ರ ಸಂಭ್ರಮ

ಪ್ರಜಾವಾಣಿ ವಿಶೇಷ
Published 18 ಜುಲೈ 2021, 8:42 IST
Last Updated 18 ಜುಲೈ 2021, 8:42 IST

ಕನ್ನಡ ಪತ್ರಿಕಾಲೋಕದಲ್ಲಿಯೇ ವಿನೂತನ ಪ್ರಯೋಗವಾಗಿ ಪ್ರಜಾವಾಣಿಯು 'ಕನ್ನಡ ಧ್ವನಿ' ಹೆಸರಿನಲ್ಲಿ ಪಾಡ್‌ಕಾಸ್ಟ್ ಚಾನೆಲ್ ಆರಂಭಿಸಿದ್ದು, ಇದರ ಮೂಲಕ ನಿತ್ಯವೂ ಮೂಡಿಬರುತ್ತಿರುವ 'ವಚನವಾಣಿ: ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ' ಸರಣಿಗೆ ಜುಲೈ 19ರಂದು ದಾಖಲೆಯ 200ನೆಯ ಕಂತಿನ ಸಡಗರ. ಅಂತರ್ಜಾಲದ ಮೂಲಕ ದೇಶ-ವಿದೇಶಗಳಿಗೆ ತಲುಪುತ್ತಿರುವ ಈ 'ಕನ್ನಡ ಧ್ವನಿ' ಕಾರ್ಯಕ್ರಮ ಇದುವರೆಗೆ ನಾಲ್ಕು ಲಕ್ಷಕ್ಕೂ ಅಧಿಕ ಬಾರಿ ಕೇಳಲ್ಪಟ್ಟಿದೆ.

ವಚನಗಳನ್ನೇ ಆಯ್ದು, ವಿನೂತನ ಪಾಡ್‌ಕಾಸ್ಟ್ ತಂತ್ರಜ್ಞಾನದ ಮೂಲಕ ಜನತೆಗೆ ತಲುಪಿಸುತ್ತಿರುವ ಪ್ರಜಾವಾಣಿಯ ವಚನವಾಣಿ ಕಾರ್ಯಕ್ರಮ ಸರಣಿಯು ಕನ್ನಡ ಪತ್ರಿಕಾ ಪ್ರಪಂಚದಲ್ಲಿ ಒಂದು ಅಪೂರ್ವ ದಾಖಲೆ.

ಡಾ.ಬಸವರಾಜ ಸಾದರ, ಡಾ. ಕುಮಾರ್ ಕಣವಿ, ಕವಿತಾ ಸಾದರ ಮತ್ತು ಬಸವಕುಮಾರ್ ಅವರು ವಚನವಾಣಿ ಪಾಡ್‌ಕಾಸ್ಟ್ ಪ್ರಸ್ತುತಪಡಿಸುತ್ತಿದ್ದಾರೆ. ಕೇಳುಗರು ಸಂದೇಶಗಳು ಹಾಗೂ ಇಮೇಲ್‌ಗಳ ಮೂಲಕ ಅವರಿಗೆ ಮೆಚ್ಚುಗೆ, ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ.

ADVERTISEMENT

ಪರಿಕಲ್ಪನೆ, ವಾಚನ ಮತ್ತು ವಿಶ್ಲೇಷಣೆಯನ್ನು ಡಾ. ಬಸವರಾಜ ಸಾದರ ಅವರು ಮಾಡುತ್ತಿದ್ದು, ರಾಗಸಂಯೋಜನೆ-ಗಾಯನವನ್ನು ಡಾ. ಕುಮಾರ್ ಕಣವಿ ಮತ್ತು ಕವಿತಾ ಸಾದರ ನಡೆಸಿಕೊಡುತ್ತಿದ್ದಾರೆ.

ವಚನವಾಣಿಯ ಪ್ರತಿದಿನದ ಸಂಚಿಕೆಯಲ್ಲಿ ನಿತ್ಯವೂ ಒಂದೊಂದು ಹೊಸ ವಚನವನ್ನು ಜಗತ್ತಿಗೆ ತಲುಪಿಸಲಾಗುತ್ತಿದೆ. ಇದರಲ್ಲಿ ಈವರೆಗೆ ಹೆಚ್ಚು ಕೇಳಿರದ ಮತ್ತು ಗಮನಿಸಿರದ ವಚನಗಳನ್ನೇ ಅಳವಡಿಸಲಾಗುತ್ತಿರುವುದು ವಿಶೇಷ. ಪ್ರತೀ ಕಾರ್ಯಕ್ರಮದಲ್ಲಿ ಮೊದಲು ಆಯಾ ವಚನದ ವಾಚನ ಇದ್ದು, ನಂತರ, ಒಂದೂವರೆ ನಿಮಿಷದ ಅವಧಿಯಲ್ಲಿ ಆ ವಚನವನ್ನು ವಿಶ್ಲೇಷಿಸಲಾಗುತ್ತದೆ. ಅನಂತರ ಆ ವಚನಕ್ಕೆ ಸಂಗೀತ ಸಂಯೋಜಿಸಿ ಹಾಡಲಾಗುತ್ತದೆ. ಹತ್ತು ನಿಮಿಷ ಅವಧಿಯಲ್ಲಿ ಇಡೀ ವಚನದ ಒಟ್ಟು ಸ್ವರೂಪ, ಅರ್ಥ ಮತ್ತು ಸಂದೇಶವು, ಮಾತು ಮತ್ತು ಹಾಡಿನ ಮೂಲಕ ಪ್ರಸ್ತುತ ಪಡಿಸುತ್ತಿರುವುದು ಒಂದು ಅಪರೂಪದ ಕ್ರಮ. ಗಂಟೆಗಟ್ಟಲೇ ಚರ್ಚಿಸಬಹುದಾದ ವಚನಗಳ ಆಂತರ್ಯವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಕೇಳುಗರಿಗೆ ಒದಗಿಸುತ್ತಿರುವ ಈ ಪ್ರಯತ್ನವು ಎಲ್ಲರ ಗಮನ ಸೆಳೆದಿದೆ.

200ನೇ ಕಂತಿನತ್ತ ವಚನವಾಣಿ ಪಾಡ್‌ಕಾಸ್ಟ್: ಪ್ರಜಾವಾಣಿಗೆ ನಿರ್ಮಾಣ ಬಳಗದ ಧನ್ಯವಾದ

ಪ್ರಜಾವಾಣಿಯಲ್ಲಿ ಪ್ರಸಾರವಾಗುತ್ತಿರುವ ವಚನವಾಣಿ ಪಾಡ್ ಕಾಸ್ಟ್ ಇದೇ 19ಕ್ಕೆ 200ನೇ ಕಂತನ್ನು ತಲುಪುತ್ತಿದೆ. ಈ ಹಿನ್ನೆಲೆಯಲ್ಲಿ ವಚನವಾಣಿ ನಿರ್ಮಾಣ ಬಳಗವು ಪ್ರಜಾವಾಣಿ ಮಾಧ್ಯಮ ಸಂಸ್ಥೆಗೆ ಧನ್ಯವಾದ ಸಲ್ಲಿಸಿದೆ.

ಪ್ರಜಾವಾಣಿ ಮಾಧ್ಯಮ ಸಂಸ್ಥೆಯ ಸಂಪಾದಕರಿಗೆ, ಎಲ್ಲ ಪದಾಧಿಕಾರಿಗಳಿಗೆ ಮತ್ತು ಪತ್ರಿಕೆಯ ಆತ್ಮೀಯ ಸ್ನೇಹಿತರ ಬಳಗಕ್ಕೆ, ನಮಸ್ಕಾರ.

ತಮ್ಮೆಲ್ಲರ ಪ್ರೀತಿ ಮತ್ತು ಸಹಕಾರದಿಂದ 'ಪ್ರಜಾವಾಣಿ, ಕನ್ನಡ ಧ್ವನಿ ಪಾಡ್ ಕಾಸ್ಟ್' ವಾಹಿನಿಯ ಮೂಲಕ ಪ್ರಸಾರವಾಗುತ್ತಿರುವ 'ವಚನವಾಣಿ' ಸರಣಿಯು ದಿನಾಂಕ 19-07-2021 ರಂದು ತನ್ನ 200ನೇ ಕಂತನ್ನು ತಲುಪಲಿದೆ. ತಮ್ಮ ಈ ಪ್ರೀತಿ ಮತ್ತು ಪ್ರೋತ್ಸಾಹಗಳಿಗೆ 'ವಚನವಾಣಿ' ನಿರ್ಮಾಣ ಬಳಗದ ವತಿಯಿಂದ ಹೃದಯದಾಳದ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ.

ಗೌರವಾದರದ ನಮಸ್ಕಾರಗಳೊಂದಿಗೆ,

ಡಾ.ಬಸವರಾಜ ಸಾದರ.
ಡಾ. ಕುಮಾರ್ ಕಣವಿ.
ಮತ್ತು ಬಸವಕುಮಾರ್.

ಬಸವಣ್ಣ, ಅಕ್ಕಮಹಾದೇವಿ, ಮಡಿವಾಳ ಮಾಚಿದೇವ ಮುಂತಾದ ಶರಣರ ವಚನಗಳನ್ನು ವಾಚಿಸುವ ಈ ವಿಶಿಷ್ಟ ಕಾರ್ಯಕ್ರಮ ಜನಮೆಚ್ಚುಗೆ ಗಳಿಸಿದೆ. ಸುದೀರ್ಘ ವಚನವಾಣಿ ಪಾಡ್ ಕಾಸ್ಟ್ ಸರಣಿಯ ಕೆಲವು ಕಂತುಗಳು ಇಲ್ಲಿವೆ.

ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ,ವಚನವಾಣಿಪಾಡ್‌ಕಾಸ್ಟ್‌ ಕೇಳಿ.

ಆ್ಯಪಲ್ ಪಾಡ್‌ಕಾಸ್ಟ್|ಸ್ಪಾಟಿಫೈ|ಬ್ರೇಕರ್|ಗೂಗಲ್ ಪಾಡ್‌ಕಾಸ್ಟ್‌ |ಪಾಕೆಟ್ ಕಾಸ್ಟ್|ರೇಡಿಯೋ ಪಬ್ಲಿಕ್|ಓವರ್‌ಕಾಸ್ಟ್| ಈ ತಾಣಗಳಲ್ಲಿ ಕೂಡಪ್ರಜಾವಾಣಿಯ ಕನ್ನಡ ಧ್ವನಿಕೇಳಬಹುದು. ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.