
ಪ್ರಜಾವಾಣಿ ವಾರ್ತೆನವದೆಹಲಿ, ಡಿ. 10 – ಇನ್ನು ಹತ್ತು ವರ್ಷಗಳಲ್ಲಿ ದೇಶವು ಆರ್ಥಿಕ ಕ್ಷೇತ್ರದಲ್ಲಿನ ಅಡಚಣೆಗಳನ್ನು ದಾಟಿ ಮುನ್ನಡೆಯುವುದೆಂಬ ಆಶಾಭಾವನೆಯನ್ನು ಕೇಂದ್ರ ಅರ್ಥಮಂತ್ರಿ ಶ್ರೀ ಟಿ. ಟಿ. ಕೃಷ್ಣಮಾಚಾರಿಯವರು ಇಂದು ಲೋಕ ಸಭೆಯಲ್ಲಿ ವ್ಯಕ್ತಪಡಿಸಿದರು.
ತೃತೀಯ ಯೋಜನೆಯ ಮಧ್ಯಕಾಲೀನ ಸಮೀಕ್ಷೆಯ ಬಗ್ಗೆ ಚರ್ಚೆಯಲ್ಲಿ ಭಾಗವಹಿಸಿದ ಸಚಿವರು, ‘ನಾಲ್ಕನೆಯ ಪಂಚವಾರ್ಷಿಕ ಯೋಜನೆಯ ಅಂತ್ಯದ ವೇಳೆಗೆ ದೀನರು, ದುರ್ಬಲರು ಹಸಿವಿನಿಂದ ತೊಳಲದಂತೆ, ಯಾರೂ ಅವಿದ್ಯಾವಂತರಾಗುಳಿಯದಂತೆ ಮಾಡುವುದು ಸಾಧ್ಯ’ ವೆಂದು ಘೋಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.