ಭಾನುವಾರ, 30-6-1963
ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಭಾರತ ಸಿದ್ಧವೆಂದು ನೆಹ್ರು
ಜಲಂಧರ್, ಜೂನ್ 29 - ಎಲ್ಲ ವಿವಾದಗಳ ಇತ್ಯರ್ಥ ಪಾಕಿಸ್ತಾನಕ್ಕೆ ನಿಜವಾಗಿ ಬೇಕಾದರೆ ಕದನಸ್ತಂಭನ ರೇಖೆ ಆಧಾರದ ಮೇಲೆ ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಭಾರತ ಸಿದ್ಧವೆಂದು ಪ್ರಧಾನ ಮಂತ್ರಿ ನೆಹರೂ ತಿಳಿಸಿದ್ದಾರೆ. ಸ್ಥಳೀಯ ಪತ್ರಿಕೋದ್ಯೋಗಿಯೊಬ್ಬರು ಸಲ್ಲಿಸಿದ್ದ ಪ್ರಶ್ನೆಗಳಿಗೆ ಉತ್ತರವಾಗಿ ಪತ್ರ ಬರೆದು ಪ್ರಧಾನ ಮಂತ್ರಿ ಹೀಗೆ ಸೂಚಿಸಿದ್ದಾರೆ.
ನೆಹರೂ ಮುಂದುವರಿದು ಪತ್ರದಲ್ಲಿ `ನಾವು ಪಾಕಿಸ್ತಾನದೊಡನೆ ಶಾಂತಿ ಸಹಕಾರದಿಂದ ಬಾಳಬೇಕೆಂದಿದ್ದೇವೆ. ಇದೇ ದೃಷ್ಟಿಯಿಂದಲೇ ನಾವು ಕಾಶ್ಮೀರ ವಿವಾದವನ್ನು ಯುದ್ಧಸ್ತಂಭನ ರೇಖೆ ಆಧಾರವಾಗಿಟ್ಟುಕೊಂಡು ಇತ್ಯರ್ಥ ಮಾಡಲು ಸೂಚಿಸಿದ್ದೆವು' ಎಂದೂ ತಿಳಿಸಿದ್ದಾರೆ.
ಅಂತಕನ ದೂತರಿಗೆ ಕಿಂಚಿತ್ತೂ ದಯವಿಲ್ಲ
ಬೆಂಗಳೂರು, ಜೂನ್ 29 - ಯುವಕ ಶೇಷಾದ್ರಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ. ಈ ಆನಂದ ಹಾಗಿರಲಿ, ಇದನ್ನು ತಿಳಿದ ಅಲ್ಪಕಾಲದಲ್ಲಿಯೇ ಅವನ ಬದುಕೇ ಕೊನೆಗೊಂಡ ದುರಂತ ನಿನ್ನೆಯ ದಿನ ನಗರದಲ್ಲಿ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.