ADVERTISEMENT

ಗುರುವಾರ, 26-1-1962

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 19:30 IST
Last Updated 25 ಜನವರಿ 2012, 19:30 IST

`ಶಾಂತಿ ಸಂವತ್ಸರವಾಗಲಿ~
ನವದೆಹಲಿ, ಜ. 25
-  ಪ್ರಸ್ತುತ ವರ್ಷವೂ ಜಗತ್ತಿನಲ್ಲಿ ಶಾಂತಿ ಸ್ಥಾಪನೆಯ ಹಾಗೂ ನಮ್ಮ ದೇಶದ ಮತ್ತು ಜನತೆಯ ಅಭಿವೃದ್ಧಿಯ ವರ್ಷವಾಗಲೆಂಬ ಆಶಯವನ್ನು ರಾಷ್ಟ್ರಪತಿ ಡಾ. ರಾಜೇಂದ್ರಪ್ರಸಾದರು ಗಣರಾಜ್ಯ ದಿನದಂದು ರಾಷ್ಟ್ರಕ್ಕಿತ್ತ ಸಂದೇಶದಲ್ಲಿ ವ್ಯಕ್ತಪಡಿಸಿದ್ದಾರೆ.

`ನಮ್ಮ ಈ 13ನೆಯ ಗಣರಾಜ್ಯ ದಿನೋತ್ಸವದ ಸಂದರ್ಭದಲ್ಲಿ ನಾನು ನಮ್ಮ ಎಲ್ಲ ದೇಶಬಾಂಧವರನ್ನೂ ಹಾಗೂ ವಿದೇಶಗಳಲ್ಲಿರುವ ಭಾರತೀಯರನ್ನೂ ಅಭಿನಂದಿಸುತ್ತೇನೆ. ಬರುವ ವರ್ಷದಲ್ಲಿ ಅವರೆಲ್ಲರಿಗೂ ಸುಖ ಸಂತೋಷಗಳು ಲಭಿಸಲೆಂದು ಹಾರೈಸುತ್ತೇನೆ~ ಎಂದು ರಾಷ್ಟ್ರಪತಿ ತಿಳಿಸಿದ್ದಾರೆ.

ಕಾಂಗ್ರೆಸ್ಸಿಗೆ ಪ್ರಥಮ ಜಯಗಳು
ಬೆಂಗಳೂರು, ಜ. 25
- ಹುಣಸೂರು ಕ್ಷೇತ್ರದಿಂದ ಶ್ರೀ ಡಿ. ದೇವರಾಜೇ ಅರಸ್, ಬಿಜಾಪುರ ಜಿಲ್ಲೆಯ ತಾಳಿಕೋಟೆ ಕ್ಷೇತ್ರದಿಂದ ಶ್ರೀ ಜಿ. ಎನ್. ಪಾಟೀಲ್ ಅವರುಗಳು ಅವಿರೋಧವಾಗಿ ಆಯ್ಕೆಗೊಂಡು 1962ರ ಚುನಾವಣೆಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಪ್ರಥಮ ಎರಡು ಜಯಗಳನ್ನು ಗಳಿಸಿಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.