ADVERTISEMENT

ಗುರುವಾರ, 3-2-1961

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 15:50 IST
Last Updated 2 ಫೆಬ್ರುವರಿ 2011, 15:50 IST

‘ಶೀಘ್ರ ಒಪ್ಪಂದದ ಆಶೆ’
ಬೆಂಗಳೂರು ಫೆ. 2 - ಕೃಷ್ಣಾ ಮತ್ತು ಗೋದಾವರಿ ನದಿಗಳ ನೀರು ಹಂಚಿಕೆ ಸಂಬಂಧ ಮೈಸೂರು,ಆಂಧ್ರ  ಹಾಗೂ ಮಹಾರಾಷ್ಟ್ರಗಳ ನಡುವೆ ಉಂಟಾಗಿರುವ ವಿವಾದ ಕೊನೆಗಾಣಿಸುವ ಪ್ರಯತ್ನವಾಗಿ ಇಂದು ರಾಜ್ಯದ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರೊಡನೆ ಮಾತುಕತೆ ನಡೆಸಿದ ಕೇಂದ್ರದ ನೀರಾವರಿ ಸಚಿವ ಶ್ರೀ ಹಫೀಜ್ ಮಹಮದ್ ಇಬ್ರಾಹಿಂ ಅವರು ‘ಶೀಘ್ರ ಒಂದು ಒಪ್ಪಂದವಾಗುವ ಆಶಯದೊಡನೆ ಹಿಂತಿರುಗುತ್ತಿದ್ದೇನೆ’ ಎಂದು ತಿಳಿಸಿದರು. ಲೋಕೋಪಯೋಗಿ ಸಚಿವ ಶ್ರೀ ಎಚ್. ಎಂ. ಚನ್ನ ಬಸಪ್ಪನವರು ‘ಬೇಗ ಒಂದು ನ್ಯಾಯಸಮ್ಮತ ಒಪ್ಪಂದದ ಆಶೆ ಇದೆ’ಎಂದರು.

ಪಾಕ್ ಪ್ರಜೆಗಳ ಬಂಧನ
ಬಳ್ಳಾರಿ, ಫೆ. 2 - ಅಗತ್ಯ ಪ್ರಯಾಣ ದಾಖಲೆ ಹೊಂದದ ಪಾಕ್ ರಾಷ್ಟ್ರೀಯರೆಂದು ಹೇಳಲಾದ ಮೂವರನ್ನು ಬಳ್ಳಾರಿ ವಿಶೇಷ ಪೊಲೀಸ್ ಸಿಬ್ಬಂದಿಯವರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.