ADVERTISEMENT

ಗುರುವಾರ, 4–4–1968

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2018, 19:30 IST
Last Updated 3 ಏಪ್ರಿಲ್ 2018, 19:30 IST

ಅಮೆರಿಕ ಜೊತೆ ಚರ್ಚೆಗೆ ಹನಾಯ್ ಸಿದ್ಧ
ವಾಷಿಂಗ್ಟನ್, ಏ. 3– ವಿಯಟ್ನಾಮ್‌ನಲ್ಲಿ ಹೋರಾಟವನ್ನು ಅಂತ್ಯಗೊಳಿಸುವ ಬಗ್ಗೆ ಅಮೆರಿಕದ ಪ್ರತಿನಿಧಿಗಳನ್ನು ಭೇಟಿ ಮಾಡಲು ಉತ್ತರ ವಿಯಟ್ನಾಮ್ ಸಿದ್ಧ ಎಂದು ಹನಾಯ್ ರೇಡಿಯೋ ಇಂದು ಬೆಳಿಗ್ಗೆ ಪ್ರಕಟಿಸಿ ಅಧ್ಯಕ್ಷ ಜಾನ್‌ಸನ್ನರ ಘೋಷಣೆಗೆ ಪ್ರತಿಕ್ರಿಯೆ ನೀಡಿತು.

ಹನಾಯ್ ನಿಲುವಿನಲ್ಲಾದ ಈ ಬದಲಾವಣೆ ವಾಷಿಂಗ್ಟನ್ನಿನಲ್ಲಿ ವಿಶೇಷ ಮಹತ್ವ ಪಡೆಯಿತು.

ಎಚ್.ಎ.ಎಲ್.ನಲ್ಲಿ ಲಾಕ್‌ಔಟ್ ಘೋಷಣೆ
ಬೆಂಗಳೂರು, ಏ. 3– ಹಿಂದೂಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್.ಎ.ಎಲ್.)ನ ಬೆಂಗಳೂರು ಡಿವಿಷನ್ನಿನ ಎಲ್ಲ ಶಾಖೆಗಳಲ್ಲಿಯೂ ನಾಳೆ ಬೆಳಿಗ್ಗೆಯಿಂದ ಲಾಕ್‌ಔಟ್ ಘೋಷಿಸಲಾಗಿದೆಯೆಂದು ಜನರಲ್ ಮ್ಯಾನೇಜರ್ ಶ್ರೀ ವಿ.ಎಂ. ಘಾಟ್ಗೆ ಅವರು ತಿಳಿಸಿದ್ದಾರೆ.

ADVERTISEMENT

ಇಂಜಿನ್ ಮತ್ತು ಫೌಂಡ್ರಿ ಡಿವಿಷನ್‌ಗಳು ಹಾಗೂ ಇಂಜಿನ್ ಒವರ್‌ಹಾಲ್ ಶಾಖೆಗಳಲ್ಲಿ ನಾಳೆ ಬೆಳಿಗ್ಗೆ 6.30ಕ್ಕೆ ಷಿಫ್ಟ್ ಕೆಲಸ ಮುಗಿದ ಕೂಡಲೆ ಮತ್ತು ಇತರ ಎಲ್ಲ ಶಾಖೆಗಳಲ್ಲಿ ಬೆಳಿಗ್ಗೆ 7.45ರಿಂದ ಲಾಕ್ ಔಟ್ ಪ್ರಾರಂಭವಾಗುವುದೆಂದೂ ಮುಂದೆ ಪ್ರಕಟಣೆ ನೀಡುವ ತನಕ ಈ ಲಾಕ್‌ಔಟ್ ಜಾರಿಯಿರಿರುತ್ತದೆಂದೂ ತಿಳಿಸಲಾಗಿದೆ.

ರೂಪಾಯಿ ಅಪಮೌಲ್ಯದ ಫಲ: ಅಧಿಕ ಋಣ ಭಾರ
ನವದೆಹಲಿ, ಏ. 3– ರೂಪಾಯಿ ಅಪಮೌಲ್ಯದ ಫಲವಾಗಿ 1966–67ನೇ ಸಾಲಿನಲ್ಲಿ ಭಾರತದ ಸಾಲದ ಹೊರೆ 1317 ಕೋಟಿ ರೂ. ಗಳಷ್ಟು ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.