ADVERTISEMENT

ಗುರುವಾರ, 5–12–1963

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 19:30 IST
Last Updated 4 ಡಿಸೆಂಬರ್ 2013, 19:30 IST

ಚಿನ್ನದ ಆಭರಣಗಳ ಮೇಲೆ ಕಡಿಮೆ ಮಿತಿ ವಿಧಿಸುವ
ಸಲಹೆಗೆ ತಿರಸ್ಕಾರ

ನವದೆಹಲಿ, ಡಿ. 4 – ಚಿನ್ನದ ಒಡವೆಗಳ ಶುದ್ಧತೆಯ ಬಗ್ಗೆ ಆಲೋಚಿಸದೆ ಒಬ್ಬ ವ್ಯಕ್ತಿ ಹೊಂದಿರಬಹುದಾದ ಆಭರಣಗಳ ಮೇಲೆ ಸರ್ಕಾರವು ಕಡಿಮೆ ಪ್ರಮಾಣದ ಮಿತಿಯೊಂದನ್ನು ವಿಧಿಸಬೇಕೆಂದೂ, ಆಭರಣಗಳ ಬೇಡಿಕೆಯನ್ನು ಕಡಿಮೆ ಮಾಡಲು ಅದೇ ಅತ್ಯುತ್ತಮ ಮಾರ್ಗ­ವೆಂದೂ ಸೂಚಿಸುವ ಸಲಹೆಯೊಂದನ್ನು ಸುವರ್ಣ ನಿಯಂತ್ರಣ ಆಜ್ಞೆಯ ಕಾರ್ಯ ರೀತಿಯನ್ನು ಕೂಲಂಕುಷವಾಗಿ ಪರಾಮರ್ಶಿಸಲು ಕೇಂದ್ರ ಹಣಕಾಸಿನ ಸಚಿವರು ರಚಿಸಿದ್ದ ಅಧಿಕಾರಿಗಳ ಅನೌಪಚಾರಿಕ ತಂಡವು ತಿರಸ್ಕರಿಸಿದೆ.

ಕಬ್ಬಿನ ಬೆಲೆ ಹೆಚ್ಚಿಸಲು
ಪ್ರಮುಖ ಗಮನ

ನವದೆಹಲಿ, ಡಿ. 4 – ದೇಶದಾದ್ಯಂತ ಕಬ್ಬಿನ ಬೆಲೆಯನ್ನು ಮಣಕ್ಕೆ 2 ರೂ. ಗಳಿಗೆ ಹೆಚ್ಚಿಸಬೇಕೆಂಬ ಕೇಳಿಕೆಗೆ ಸರ್ಕಾರ ಪ್ರಮುಖ ಗಮನ ಕೊಡುತ್ತದೆಯೆಂದು ಕೇಂದ್ರ ಆಹಾರ ಮತ್ತು ವ್ಯವಸಾಯ ಸಚಿವ ಶ್ರೀ ಸ್ವರಣ್‌ಸಿಂಗ್‌ ಇಂದು ಲೋಕ ಸಭೆಗೆ ತಿಳಿಸಿದರು.
ಈ ಬಗ್ಗೆ ಇನ್ನು ಕೆಲ ದಿನಗಳಲ್ಲೇ ನಿರ್ಧಾರ ಕೈಗೊಳ್ಳುವ ಸಾಧ್ಯವಾದೀತೆಂದೂ ಅವರು ನಿರೀಕ್ಷಿಸಿದರು.
 

‘ಮದ್ರಾಸ್‌ಗೆ ಕಾವೇರಿ ನೀರನ್ನು
ಒದಗಿಸುವ ಯೋಜನೆ ಇಲ್ಲ’

ನವದೆಹಲಿ, ಡಿ. 4 – ಮದ್ರಾಸ್‌ ನಗರಕ್ಕೆ ಕಾವೇರಿ ನದಿಯಿಂದ ನೀರು ಸರಬರಾಜು ಮಾಡುವ ಯೋಜನೆ ಯಾವುದೂ ಇಲ್ಲವೆಂದು ನೀರಾವರಿ ಶಾಖೆ ಸಚಿವ ಡಾ. ಕೆ. ಎಲ್‌. ರಾವ್‌ ಅವರು ಇಂದು ರಾಜ್ಯ ಸಭೆಯಲ್ಲಿ ಶ್ರೀ ಎಚ್‌. ಸಿ. ಕಾರಯಲಾರ್‌ಗೆ ಹೇಳಿದರು.
ತಾವು ಇತ್ತೀಚೆಗೆ ಹೇಳಿದ್ದ ಕಾವೇರಿ ನದಿ ನೀರನ್ನು ಬೆಂಗಳೂರು ನಗರಕ್ಕೆ ಸರಬರಾಜು ಮಾಡುವ ವಿಷಯವೆಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT