ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 19:30 IST
Last Updated 3 ಮಾರ್ಚ್ 2014, 19:30 IST

ಬುಧವಾರ, 4–3–1964
ರಾಜ್ಯದಲ್ಲಿ ಮತ್ತೆ ಐದು ಸಕ್ಕರೆ ಕಾರ್ಖಾನೆಗಳ ಸ್ಥಾಪನೆ, ಶೀಘ್ರವೇ ಅನುಮತಿ
ನವದೆಹಲಿ, ಮಾ. 3
– ಮೈಸೂರು ರಾಜ್ಯದಲ್ಲಿ ಈಗಿರುವ 5 ಸಕ್ಕರೆ ಕಾರ್ಖಾ­ನೆಗಳನ್ನು ಬಡಕಾಯಿಸಲು ಮತ್ತು ಇನ್ನೂ 5 ಹೊಸ ಸಕ್ಕರೆ ಕಾರ್ಖಾನೆ­ಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಶೀಘ್ರವೇ ಅನುಮತಿ ನೀಡಲಿದೆ.

ಗೇಣಿ ಅವಧಿ ವಿಸ್ತರಣಾ ಮಸೂದೆಗೆ ಮೇಲ್ಮನೆ ಒಪ್ಪಿಗೆ
ಬೆಂಗಳೂರು, ಮಾ. 3
–  ಪ್ರಕೃತ ಜಾರಿಯಲ್ಲಿರುವ ಗೇಣಿ ಶಾಸನದ ಅವಧಿಯು ಇದೇ ತಿಂಗಳು 30ಕ್ಕೆ ಮುಕ್ತಾಯವಾಗಲಿದ್ದು ಅದರ ಅವಧಿಯನ್ನು ಒಂದು ವರ್ಷ ಕಾಲ ಹೆಚ್ಚಿಸುವ ಮಸೂದೆಯನ್ನು ಇಂದು ವಿಧಾನ ಪರಿಷತ್ತು ಅಂಗೀಕರಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.