ADVERTISEMENT

ಬುಧವಾರ, 6–12–1967

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2017, 19:30 IST
Last Updated 5 ಡಿಸೆಂಬರ್ 2017, 19:30 IST
ಬುಧವಾರ, 6–12–1967
ಬುಧವಾರ, 6–12–1967   

ಪ್ರಜಾವಾಣಿ– ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಿಗೆ ರಾಷ್ಟ್ರ ಪ್ರಶಸ್ತಿ

ನವದೆಹಲಿ, ಡಿ. 5– ಶ್ರೇಷ್ಠ ಮುದ್ರಣ ಹಾಗೂ ವಿನ್ಯಾಸಕ್ಕಾಗಿ ‘ಪ್ರಜಾವಾಣಿ’ಗೆ ಭಾರತೀಯ ಭಾಷಾ ಪತ್ರಿಕೆಗಳಲ್ಲಿ ಈ ಬಾರಿ ಭಾರತ ಸರ್ಕಾರದ ದ್ವಿತೀಯ ಬಹುಮಾನ ಲಭಿಸಿದೆ.

ಇಂಗ್ಲಿಷ್ ಪತ್ರಿಕೆಗಳಲ್ಲಿ ‘ಡೆಕ್ಕನ್ ಹೆರಾಲ್ಡ್’ಗೆ ತೃತೀಯ ಸ್ಥಾನ ದೊರೆತು ಅರ್ಹತಾ ಪತ್ರ ಬಂದಿದೆ. ‘ಪ್ರಜಾವಾಣಿ’ಗೆ ರಾಷ್ಟ್ರಪ್ರಶಸ್ತಿ ಬಂದಿರುವುದು ಇದು ಆರನೆಯ ಬಾರಿ.

ADVERTISEMENT

ಅಂಬಾಲಾದ ‘ಟ್ರಿಬ್ಯೂನ್’ (ಪ್ರಥಮ ಬಹುಮಾನ), ಮುಂಬಯಿಯ ‘ಇಕನಾಮಿಕ್ ಟೈಮ್ಸ್’ (ದ್ವಿತೀಯ ಬಹುಮಾನ) ಪ್ರಶಸ್ತಿ ಪಡೆದ ಇತರ ಇಂಗ್ಲಿಷ್ ದಿನಪತ್ರಿಕೆಗಳು.

ದೆಹಲಿಯ ಹಿಂದಿ ದೈನಿಕ ‘ಹಿಂದೂಸ್ತಾನ್’ (ಪ್ರಥಮ ಬಹುಮಾನ), ಮುಂಬಯಿಯ ಮರಾಠಿ ದೈನಿಕ ‘ಮಹಾರಾಷ್ಟ್ರ ಟೈಮ್ಸ್‌’ (‘ಪ್ರಜಾವಾಣಿ’

ಯೊಡನೆ ಎರಡನೆ ಬಹುಮಾನ ಹಂಚಿಕೊಂಡಿದೆ), ಮುಂಬಯಿಯ ಗುಜರಾತಿ ದೈನಿಕ ‘ಜನಶಕ್ತಿ’ (ಅರ್ಹತಾ ಪತ್ರ) ಪ್ರಶಸ್ತಿ ಪಡೆದಿರುವ ಭಾರತೀಯ ಭಾಷಾ ಪತ್ರಿಕೆಗಳು. ದೆಹಲಿಯ ‘ಕನ್ನಡ ಭಾರತಿ’ ಸಂಸ್ಥೆ ‍ ಪ್ರಕಟಿಸಿರುವ ‘ಷೇಕ್ಸ್‌ಪಿಯರಿಗೆ ನಮಸ್ಕಾರ’ ಎಂಬ ಪುಸ್ತಕಕ್ಕೆ ಭಾರತೀಯ ಭಾಷಾ ಪುಸ್ತಕಗಳಲ್ಲಿ ಪ್ರಥಮ ಪುರಸ್ಕಾರ ಲಭಿಸಿದೆ.

ಉಪಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಇಂದು ಸಂಜೆ ‘ಮಾವಲಣಕರ್ ಭವನ’ದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ವಿತರಣೆ ಮಾಡಿದರು.

ಸರ್ವಸಮ್ಮತ ಭಾಷಾ ಧೋರಣೆಗೆ ಪ್ರಯತ್ನ: ಇಂದಿರಾ

ನವದೆಹಲಿ, ಡಿ.5– ಅಧಿಕೃತ ಭಾಷಾ ಮಸೂದೆ ಕುರಿತು ಸಂಸತ್ತಿನ ಎಲ್ಲಾ ವಿಚಾರ ಪಂಥಗಳೊಡನೆಯೂ ಸಮಾಲೋಚಿಸಲು ತಾವು ಸಿದ್ಧರಿರುವುದಾಗಿ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಇಂದು ರಾಜ್ಯಸಭೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.