ADVERTISEMENT

ಭಾನುವಾರ, 24–3–1968

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 19:30 IST
Last Updated 23 ಮಾರ್ಚ್ 2018, 19:30 IST

ಜುಲೈ 1 ರಿಂದ ಬಿದರೆ, ಕುಮಟಾ, ಹೊನ್ನಾವರಗಳಲ್ಲಿ ಪಾನ ನಿರೋಧ ರದ್ದು 

ಬೆಂಗಳೂರು, ಮಾ. 23– ಬಿದರೆ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಕುಮಟಾ ಹಾಗೂ ಹೊನ್ನಾವರ ತಾಲ್ಲೂಕುಗಳಲ್ಲಿ ಮುಂದಿನ ಜುಲೈ ತಿಂಗಳ ಒಂದರಿಂದ ಮದ್ಯಪಾನಕ್ಕೆ ನಿಷೇಧವಿಲ್ಲ.

ಅರ್ಥ ಹಾಗೂ ಅಬ್ಕಾರಿ ಇಲಾಖೆಗಳ ಸಚಿವ ಶ್ರೀ ರಾಮಕೃಷ್ಣ ಹೆಗಡೆ ಅವರು, ರಾಜ್ಯದಲ್ಲಿ ಪಾನನಿರೋಧ ಸಡಿಲಿಕೆಯ ಎರಡನೇ ಘಟ್ಟದ ನಿರ್ಧಾರ
ವನ್ನು ಇಂದು ವಿಧಾನಸಭೆಯಲ್ಲಿ ಪ್ರಕಟಿಸಿದರು.

ADVERTISEMENT

‘ದೇಶದ್ರೋಹಿ’ ಪದ ಬಳಕೆಗೆ ಸದಸ್ಯರ ಉಗ್ರ ಪ್ರತಿಭಟನೆ

ಬೆಂಗಳೂರು, ಮಾ. 23– ಧಾನ್ಯ ಎತ್ತುವಳಿ (ಲೆವಿ)ಯನ್ನು ವಿರೋಧಿಸುವವರು ದೇಶದ್ರೋಹಿಗಳೇ ಅಥವಾ ಸಮಾಜಘಾತಕರೇ?

ಈ ಪ್ರಶ್ನೆ ಇಂದು ವಿಧಾನ ಸಭೆಯಲ್ಲಿ ಉದ್ಭವಿಸಿ ಕೋಲಾಹಲವನ್ನೇ ಉಂಟು ಮಾಡಿತು. ಕೆರಳಿದ ವಿರೋಧಪಕ್ಷ ಎರಡು ಪದಗಳನ್ನು ವಿರೋಧಿಸಿದರೂ ‘ದೇಶ ದ್ರೋಹಿ’ ಎಂಬುದಕ್ಕೆ ವಿಶೇಷತಃ ಪ್ರತಿಭಟನೆ ಸೂಚಿಸಿ, ದಾಖಲೆಯಿಂದ ಕಿತ್ತು ಹಾಕಲು ಪದೇ ಪದೇ ಒತ್ತಾಯಪಡಿಸಿತು.

ಉತ್ತರ ಪ್ರದೇಶ ಸಂಪುಟ ರಚನೆಗೆ ಎಸ್.ವಿ.ಡಿ.– ಕಾಂಗ್ರೆಸ್ ಸೆಣಸಾಟ

ಲಖನೌ, ಮಾ. 23– ಉತ್ತರ ಪ್ರದೇಶ ದಲ್ಲಿ ಮುಂದಿನ ಸಚಿವ ಸಂಪುಟ ರಚನೆಗೆ ಕಾಂಗ್ರೆಸ್ ಮತ್ತು ಸಂಯುಕ್ತ ವಿಧಾಯಕದಳಗಳೆರಡೂ ಸೆಣಸಾಡುತ್ತಿವೆ.

ವಿಧಾನ ಸಭೆಯಲ್ಲಿ ತನಗೇ ಬಹುಮತವಿದೆಯೆಂದು ಪ್ರತಿಯೊಂದು ಪಕ್ಷವೂ ಬಹಿರಂಗವಾಗಿ ಹೇಳಿಕೊಳ್ಳುತ್ತಿರುವುದು ಮಾತ್ರವಲ್ಲದೆ ರಾಜ್ಯಪಾಲರಿಗೂ ತಿಳಿಸಿದೆ.

ಪೂಣಚ್ಚರ ರಾಜಿನಾಮೆಗೆ ಪ್ರಧಾನಿ ನಕಾರ

ಬೆಂಗಳೂರು, ಮಾ. 23– ಯಲವಿಗಿ ರೈಲು ಅಪಘಾತದ ಕಾರಣ ರಾಜಿನಾಮೆ ಕೊಡಲು ರೈಲ್ವೆ ಸಚಿವ  ಶ್ರೀ ಸಿ.ಎಂ. ಪೂಣಚ್ಚ ಅವರು ಸೂಚಿಸಿದ್ದ ಸಿದ್ಧತೆಗೆ ಪ್ರಧಾನಿ ಇಂದಿರಾ ಗಾಂಧಿಯವರು ಒಪ್ಪಿಗೆ ಕೊಟ್ಟಿಲ್ಲವೆಂದು ‘ಸ್ಟೇಟ್ಸ್‌ಮನ್’ (ದೆಹಲಿ) ಪತ್ರಿಕೆ ವರದಿ ಮಾಡಿದೆ.

ಅಪಘಾತ ತಮ್ಮ ಆಡಳಿತ ನಿರ್ವಹಣೆ ಪರಿಣಾಮವಾಗಿ ಸಂಭವಿಸಿತೆಂದು ಪ್ರಧಾನಿ ಭಾವಿಸುವುದಾದರೆ ತಾವು ಸಚಿವ ಸ್ಥಾನ ತ್ಯಜಿಸಲು ಸಿದ್ಧರಿರುವುದಾಗಿ ಶ್ರೀ ಪೂಣಚ್ಚರವರು ಮೂರು ದಿನಗಳ ಹಿಂದೆ ತಿಳಿಸಿದರೆಂದು ನಂಬಲರ್ಹ ವಲಯಗಳಿಂದ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.