ಮಾಸ್ಕೊದಲ್ಲಿ ಜುಲೈನಲ್ಲಿ ಚರ್ಚೆ ಪುನರಾರಂಭ
ವಾಷಿಂಗ್ಟನ್, ಜೂನ್ 10 -ನ್ಯೂಕ್ಲಿಯರ್ ಪರೀಕ್ಷಾ ಪ್ರಯೋಗ ನಿಷೇಧ ಒಪ್ಪಂದ ಕುರಿತ ಮಾತುಕತೆಯನ್ನು ಜುಲೈ ಮಧ್ಯದಲ್ಲಿ ಮಾಸ್ಕೊದಲ್ಲಿ ಪುನರಾರಂಭಿಸಲು ಇಂದು ಅಮೆರಿಕ, ರಷ್ಯ ಮತ್ತು ಬ್ರಿಟನ್ ನಿರ್ಧರಿಸಿದವು.
ಅಮೆರಿಕದ ಅಧ್ಯಕ್ಷ ಕೆನೆಡಿ ಮತ್ತು ಬ್ರಿಟಿಷ್ ಪ್ರಧಾನ ಮಂತ್ರಿ ಮ್ಯಾಕ್ಕಿಲನ್‌ನವರ ವಿಶೇಷ ಪ್ರತಿನಿಧಿಗಳು ಮಾಸ್ಕೊ ಮಾತುಕತೆಗಳಲ್ಲಿ ಭಾಗವಹಿಸುವರೆಂದು ಲಂಡನ್ನಿನಲ್ಲಿ ಅಧಿಕೃತವಾಗಿ ಪ್ರಕಟಿಸಲಾಯಿತು.ಹೈಸ್ಕೂಲುಗಳಲ್ಲಿ
`ಸೀಟಿನ ಕಷ್ಟದ'ನಿವಾರಣೆಗೆ ಕ್ರಮ
ಬೆಂಗಳೂರು, ಜೂನ್ 10- ಹೈಸ್ಕೂಲಿಗೆ ಸೇರಲಿಚ್ಛಿಸುವ ಎಲ್ಲ ಮಕ್ಕಳಿಗೂ ಪ್ರವೇಶ ದೊರಕಿಸಲು ಸೂಕ್ತ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ತಾವು ನಿರ್ದೇಶನವಿತ್ತಿರುವುದಾಗಿ ಶಿಕ್ಷಣ ಸಚಿವ ಶ್ರೀ ಎಸ್. ಆರ್. ಕಂಠಿಯವರು ಇಂದು ಇಲ್ಲಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.