ADVERTISEMENT

ಮಂಗಳವಾರ, 12-4-1961

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2011, 19:30 IST
Last Updated 11 ಏಪ್ರಿಲ್ 2011, 19:30 IST

ಆಂಧ್ರ ಸಂಪುಟ ವಿಸ್ತರಣೆಗೆ ನೆಹರೂ ವಿರೋಧ
ಹೈದರಾಬಾದ್, ಏ. 11 - ಆಂಧ್ರ ಸಂಪುಟ ವಿಸ್ತರಣೆಗೆ ಪ್ರಧಾನ ಮಂತ್ರಿ ನೆಹರೂರವರು ಸಮ್ಮತಿ ನೀಡಿಲ್ಲವೆಂದು ಇಲ್ಲಿ ತಿಳಿದು ಬಂದಿದೆ. ನೆಹರೂರವರು ತಮ್ಮ ಅಭಿಪ್ರಾಯವನ್ನು ಶ್ರೀ ಡಿ. ಸಂಜೀವಯ್ಯ ಮತ್ತು ಆರ್ಥಿಕ ಮಂತ್ರಿ ಶ್ರೀ ಕೆ. ಬ್ರಹ್ಮಾನಂದರೆಡ್ಡಿಯವರಿಗೆ ತಿಳಿಸಿದ್ದಾರೆಂದು ಹೇಳಲಾಗಿದೆ.

ರಾಜ್ಯದ ಹೆಸರು ‘ಕರ್ನಾಟಕ’ ಎಂದು ಬದಲಾಗಲಿ
ಬೆಂಗಳೂರು, ಏ. 11 - ಈಗಾಗಲೇ ಎರಡು ಬಾರಿ ಅಪೂರ್ಣವಾಗಿ ಚರ್ಚೆಯಾಗಿರುವ ರಾಜ್ಯದ ಹೆಸರು ‘ಕರ್ನಾಟಕ’ ವೆಂದಾಗಬೇಕೆಂಬ ಸಲಹೆಯನ್ನು ಕುರಿತು ವಿಧಾನ ಸಭೆ ಈ ಅಧಿವೇಶನದಲ್ಲಿ ಒಂದು ತೀರ್ಮಾನ ಕೈಗೊಳ್ಳುವಂತೆ ಕಾಂಗ್ರೆಸ್ ಪಕ್ಷದ ಸುಮಾರು 40 ಮಂದಿ ಸದಸ್ಯರು ಒಂದು ನಿಶ್ಚಿತ ಕ್ರಮವನ್ನು ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.