ADVERTISEMENT

ಮಂಗಳವಾರ, 17-4-1962

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 19:30 IST
Last Updated 16 ಏಪ್ರಿಲ್ 2012, 19:30 IST

ಮಂಗಳವಾರ, 17-4-1962
ಮೂರನೇ ಲೋಕಸಭೆ ಕಾರ್ಯಾರಂಭ
ನವದೆಹಲಿ, ಏ. 16 -
`ದೇಶದ ಮತ್ತು ಜನತೆಯ ಯೋಗಕ್ಷೇಮದ ಗುರುತರ ಹೊಣೆ ವಹಿಸಿಕೊಳ್ಳುವ~ ಸೂಚನೆಯಾಗಿ ಎಲ್ಲ ಸದಸ್ಯರೂ ಮೌನವಾಗಿ ಎದ್ದು ನಿಂತು ಈ ದಿನ ಭಾರತದ ಮೂರನೆಯ ಲೋಕ ಸಭೆ ತನ್ನ ಐದು ವರ್ಷಗಳ ಅಧಿಕಾರಾವಧಿಯನ್ನು ಆರಂಭಿಸಿತು.

ಮೆಡಿಕಲ್ ಸ್ಕೂಲ್‌ಗಳ ರದ್ದು?
ದಾವಣಗೆರೆ, ಏ. 16 -  ವೈದ್ಯಕೀಯ ಡಿಪ್ಲೋಮಾಗಳನ್ನು ನೀಡುವುದರ ವಿರುದ್ಧ ತಜ್ಞರು ಅಭಿಪ್ರಾಯಗಳನ್ನು ನೀಡಿರುವುದರಿಂದ ಮುಂದಿನ ಶಿಕ್ಷಣ ವರ್ಷದ ಆದಿಯಿಂದ ಮೆಡಿಕಲ್ ಸ್ಕೂಲ್‌ಗಳನ್ನು ಮುಚ್ಚಲಾಗುವುದೆಂಬ ಸೂಚನೆಯನ್ನು ನಿನ್ನೆ ಮುಖ್ಯಮಂತ್ರಿ ಶ್ರೀ ಎಸ್. ಆರ್. ಕಂಠಿಯವರು ಇಲ್ಲಿ ಪೌರ ಸನ್ಮಾನ ಸಮಾರಂಭದಲ್ಲಿ ಮಾಡಿದ ಭಾಷಣದಲ್ಲಿ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.