ADVERTISEMENT

ಮಂಗಳವಾರ, 9–4–1968

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2018, 19:30 IST
Last Updated 8 ಏಪ್ರಿಲ್ 2018, 19:30 IST

ಕೃಷ್ಣಾ ನೀರಿನ ಹಂಚಿಕೆ: ಕೊನೆಯ ಯತ್ನ ವಿಫಲವಾದರೆ ವಿವಾದ ಪಂಚಾಯ್ತಿಗೆ

ನವದೆಹಲಿ, ಏ. 8– ಕೃಷ್ಣಾ, ಗೋದಾವರಿ ಮತ್ತು ನರ್ಮದಾ ನದಿ ನೀರನ್ನು ಕುರಿತ ಅಂತರರಾಜ್ಯ ಜಲ ವಿವಾದಗಳನ್ನು ಪರಸ್ಪರ ಮಾತುಕತೆಗಳ ಮೂಲಕ ಇತ್ಯರ್ಥ ಮಾಡಲು ಈಗ ಕೊನೆಯ ಪ್ರಯತ್ನವನ್ನು ನಡೆಸಲಾಗುತ್ತಿದೆ.

ಈ ವಿಷಯವನ್ನು ಇಂದು ಲೋಕಸಭೆಯಲ್ಲಿ ಕೇಂದ್ರ ನೀರಾವರಿ ಹಾಗೂ ವಿದ್ಯುತ್ ಸಚಿವ ಡಾ. ಕೆ.ಎಲ್. ರಾವ್ ಅವರು ತಿಳಿಸಿದರು.

ADVERTISEMENT

ಅಂತರರಾಜ್ಯ ನದಿಗಳ ವಿವಾದ ಶಾಸನದ ಪ್ರಕಾರ ಈ ವಿವಾದಗಳನ್ನು ಶೀಘ್ರದಲ್ಲಿಯೇ ಪಂಚಾಯಿತಿಗೆ ಒಪ್ಪಿಸಬಹುದು ಎಂದೂ ಅವರು ಹೇಳಿದರು.

**

ಆಂಧ್ರಕ್ಕೆ ಮೈಸೂರಿನ ನೋಟಿಸ್‌ ಸೇರಿಲ್ಲ

ಹೈದರಾಬಾದ್, ಏ. 8– ನದಿ ನೀರಿನ ವಿವಾದದ ವಿಷಯದಲ್ಲಿ ಮಹಾರಾಷ್ಟ್ರ ಮತ್ತು ಮೈಸೂರು ಸರ್ಕಾರಗಳು ಕಳುಹಿಸಿಕೊಟ್ಟಿವೆಯೆಂದು ಹೇಳಲಾದ ನೋಟೀಸುಗಳ ಬಗ್ಗೆ ಆ ಸರ್ಕಾರಗಳಿಂದ ತನಗೆ ಪತ್ರಗಳೇನೂ ಬಂದಿಲ್ಲವೆಂದು ಆಂಧ್ರ ಸರ್ಕಾರ ಹೇಳಿದೆ.

**

ಪದವಿ ತ್ಯಾಗ ಪ್ರಶ್ನೆ: ಪದೇ ಪದೇ ಉತ್ತರಿಸುವುದಿಲ್ಲ ಎಂದು ಎಸ್ಸೆನ್

ಬೆಂಗಳೂರು, ಏ. 8– ತಾವು ಈಗಾಗಲೇ ಮುಖ್ಯಮಂತ್ರಿ ಪದವಿ ಬಿಡುವ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಭೆಯಲ್ಲಿ ವ್ಯಕ್ತಪಡಿಸಿರುವ ಕಾರಣ ಪದೇ ಪದೇ ಆ ಪ್ರಶ್ನೆಗೆ ಉತ್ತರ ಕೊಡುವುದಿಲ್ಲವೆಂದು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ವಿಧಾನಸಭೆಯಲ್ಲಿ ಸ್ಪಷ್ಟವಾಗಿ ಹೇಳಿದರು.

**

ಅಧ್ಯಕ್ಷ ಜಾನ್ಸನ್‌ಗೆ ಹಾನಾಯ್ ಪತ್ರ

ವಾಷಿಂಗ್ಟನ್, ಏ. 8– ಇಂದು ಹಾನಾಯ್‌ನಿಂದ ತಮಗೆ ಸಂದೇಶವೊಂದು ಬಂದಿದೆಯೆಂದು, ಅಮೆರಿಕ ಹಾಗೂ ಉತ್ತರ ವಿಯಟ್ನಾಂ ಪ್ರತಿನಿಧಿಗಳು ಮಾತುಕತೆ ನಡೆಸುವುದಕ್ಕೆ ದಿನ ಹಾಗೂ ಸ್ಥಳಗಳನ್ನು ನಿರ್ಧರಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಅಧ್ಯಕ್ಷ ಜಾನ್ಸನ್ ಇಂದು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.