ADVERTISEMENT

ಮಲೇಸಿಯ ಒಕ್ಕೂಟದ ಉದಯ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2013, 19:59 IST
Last Updated 15 ಸೆಪ್ಟೆಂಬರ್ 2013, 19:59 IST

ಸೋಮವಾರ, 16–9–1963

ಮಲೇಸಿಯ ಒಕ್ಕೂಟದ ಉದಯ

ಕ್ವಾಲಾಲಂಪುರ, ಸೆ. 15– ಸರ್ವತಂತ್ರ ಸ್ವತಂತ್ರ ಪರಮಾಧಿಕಾರದ ಮಲೇಸಿಯಾ ರಾಜ್ಯವು–ಹೊಸ ಏಷ್ಯಾ ರಾಜ್ಯವು–ಇಂದು ಇಲ್ಲಿ ಆಯಕಟ್ಟಿನ ಆಗ್ನೇಯ ಏಷ್ಯಾ ಪ್ರದೇಶದಲ್ಲಿ ರೂಪುಗೊಂಡಿತು. ಥಾಯ್ಲೆಂಡಿನ ದಕ್ಷಿಣ ಗಡಿಯಿಂದ ಸಿಂಗಪುರದವರೆಗೆ, ಸಮುದ್ರದಾಚೆ ಹಾದು ಇಂಡೊನೀಸಿಯದ ಬೋರ್ನಿಯೊ ಗಡಿವರೆಗೆ ವ್ಯಾಪಿಸುವುದು.

ಒಂದು ಕೋಟಿ ಮಲಯನರು, ಚೀಣೀಯರು, ಭಾರತೀಯರು, ಯೂರೋಪಿಯನ್ನರು, ಇಬಾನರು, ಮುರುತ್‌್ಸ, ಡ್ಯಾಕ್ಸ್ ಮತ್ತು ಇನ್ನೂ ಅನೇಕ ಬುಡಕಟ್ಟಿನ ಜನರು ಈ ಒಕ್ಕೂಟದ ಪ್ರಜಾಸಂಖ್ಯೆಗೆ ಸೇರಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.