ಸೋಮವಾರ, 14-3-1961
ಲಾಭದ ಮೇಲೆ ತೆರಿಗೆ ಹಾಕಲು ನಿರಾಕರಣೆ
ನವದೆಹಲಿ, ಮಾ. 13 - ಕೇಂದ್ರ ಹಣಕಾಸು ಮಂತ್ರಿ ಶ್ರೀ ಮೊರಾರ್ಜಿ ದೇಸಾಯಿ ಬಜೆಟ್‌ನಲ್ಲಿ ತಾವು ಸಲಹೆ ಮಾಡಿರುವ ಹೊಸ ತೆರಿಗೆಗಳನ್ನು ಸಮರ್ಥಿಸಿದರು. ಅವುಗಳಲ್ಲಿ ಬದಲಾವಣೆ ಏನನ್ನೂ ಸೂಚಿಸಿದ ಅವರು ಹೆಚ್ಚು ಲಾಭದ ಮೇಲೆ ತೆರಿಗೆ ವಿಧಿಸಬೇಕೆಂಬ ಒತ್ತಾಯವನ್ನು ನಿರಾಕರಿಸಿದರು.
ಹೆಚ್ಚುವರಿ ವೆಚ್ಚಕ್ಕೆ ವಿಧಾನ ಸಭೆ ಒಪ್ಪಿಗೆ
ಬೆಂಗಳೂರು, ಮಾ. 13 - ರಾಜ್ಯ ಸರ್ಕಾರ ಪ್ರಚಲಿತ ಆರ್ಥಿಕ ವಲಯದಲ್ಲಿ ಆಯ - ವ್ಯಯ ಪಟ್ಟಿಯಲ್ಲಿ ಅಂದಾಜು ಮಾಡಿರುವುದಕ್ಕಿಂತ ಹೆಚ್ಚಿಗೆ ವೆಚ್ಚ ಮಾಡಿದ 16 ಕೋಟಿ 18 ಲಕ್ಷ 87 ಸಾವಿರ ರೂಪಾಯಿಗಳಿಗೆ ಇಂದು ವಿಧಾನ ಸಭೆ ಒಪ್ಪಿಗೆ ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.