ADVERTISEMENT

ಶನಿವಾರ, 4–5–1968

​ಪ್ರಜಾವಾಣಿ ವಾರ್ತೆ
Published 3 ಮೇ 2018, 19:30 IST
Last Updated 3 ಮೇ 2018, 19:30 IST

ಶುಕ್ರವಾರ ಪ್ರಾರಂಭ: ಪ್ಯಾರಿಸ್‌ನಲ್ಲಿ ವಿಯಟ್ನಾಂ ಶಾಂತಿ ಚರ್ಚೆ

ವಾಷಿಂಗ್‌ಟನ್, ಮೇ 3– ವಿಯಟ್ನಾಂ ಶಾಂತಿ ಸಂಧಾನವನ್ನು ಮುಂದಿನ ಶುಕ್ರವಾರದಿಂದ ಫ್ರೆಂಚ್ ರಾಜಧಾನಿ ಪ್ಯಾರಿಸ್‌ನಲ್ಲಿ ಆರಂಭಿಸಬೇಕೆಂಬ ಹಾನಾಯ್ ಸಲಹೆಯನ್ನು ಅಮೆರಿಕ ಅಧ್ಯಕ್ಷ ಜಾನ್ಸನ್ ಅವರು ಇಂದು ಒಪ್ಪಿಕೊಂಡರು.

ಎಲ್ಲಾ ಪಕ್ಷಗಳೂ ಫ್ರಾನ್ಸ್‌ನಿಂದ ನ್ಯಾಯ ಮತ್ತು ನಿಷ್ಪಕ್ಷಪಾತ ಆತಿಥ್ಯ ನಿರೀಕ್ಷಿಸಬಹುದೆಂದು ಅವರು ಇಂದು ರಾಷ್ಟ್ರಕ್ಕೆ ನೀಡಿದ ಟೆಲಿವಿಷನ್ ಪ್ರಸಾರದಲ್ಲಿ ಪ್ರಕಟಿಸಿದರು.

ADVERTISEMENT

ಹಾನಾಯ್ ಸೂಚನೆ

ಸಿಂಗಪುರ, ಮೇ 3– ವಿಯಟ್ನಾಂ ಶಾಂತಿ ಮಾತುಕತೆ ಆರಂಭಿಸಲು ನಾಂ‍ಪ್ಲೆನ್ ಮತ್ತು ವಾರ್ಸಾಗಳಂತೆ ಪ್ಯಾರಿಸ್ ಕೂಡ ಸೂಕ್ತವೆಂದು ಹಾನಾಯ್  ರೇಡಿಯೋ ಇಂದು ರಾತ್ರಿ ಬಿತ್ತರಿಸಿತು.

ನಿವೇಶನದ ಆಯ್ಕೆಯಲ್ಲೇ ಬಿಕ್ಕಟ್ಟು ತಲೆ ಹಾಕಿದ್ದಂತೆ ಹಾನಾಯ್ ರೇಡಿಯೋ ಪ್ರಸಾರ ಅಚ್ಚರಿಯನ್ನುಂಟು ಮಾಡಿತು.

ಭಾರತದ ವಿರುದ್ಧ ಅಮೆರಿಕದ ನೆಲೆ ಬಳಕೆ: ರಾಜ್ಯಸಭೆ ಕಳವಳ

ನವದೆಹಲಿ, ಮೇ 3– ಭಾರತದಲ್ಲಿ ಗೂಢಚರ್ಯೆ ನಡೆಸಲು ಪೆಷಾವರದಲ್ಲಿರುವ ಅಮೆರಿಕದ ನೆಲೆಯನ್ನು ಉಪಯೋಗಿಸಲಾಗುತ್ತಿದೆ ಎಂಬ ವರದಿಯ ಬಗ್ಗೆ ರಾಜ್ಯಸಭೆಯಲ್ಲಿ ಇಂದು ಹಲವು ಮಂದಿ ಸದಸ್ಯರು ಕಳವಳ ವ್ಯಕ್ತಪಡಿಸಿದರು.

ಅಂಥ ಯಾವುದೇ ಕೃತ್ಯವನ್ನು ‘ಸ್ನೇಹಪರವಲ್ಲದ ಕೃತ್ಯ’ವೆಂದು ಭಾರತ ಪರಿಗಣಿಸುವುದಾಗಿ ಅಮೆರಿಕಕ್ಕೆ ಸ್ಪಷ್ಪಪಡಿಸಬೇಕೆಂದು ಸಭೆಯಲ್ಲಿ ಒತ್ತಾಯಪಡಿಸಲಾಯಿತು.

15 ರಂದು ಆಂಧ್ರ–ಮೈಸೂರು ಮುಖ್ಯಮಂತ್ರಿಗಳ ಸಭೆ

ಬೆಂಗಳೂರು, ಮೇ 3– ಕೃಷ್ಣಾ ನದಿ ನೀರು ಹಂಚಿಕೆ ವಿವಾದದ ಸಂಬಂಧದಲ್ಲಿ ಆಂಧ್ರದೊಡನೆ ಒಪ್ಪಂದಕ್ಕಾಗಿ ಮೈಸೂರು ಕಡೆಯ ಪ್ರಯತ್ನ ಮಾಡುವ ಸಂಬಂಧದಲ್ಲಿ ಮೇ 15 ಅಥವಾ 16 ರಂದು ಆಂಧ್ರ ಹಾಗೂ ಮೈಸೂರು ಮುಖ್ಯಮಂತ್ರಿಗಳ ಸಭೆ ನಡೆಸುವ ಸಂಭವವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.