ಹೈಸ್ಕೂಲ್‌ಗಳಲ್ಲಿ 253 ಹೊಸ ಸೆಕ್ಷನ್
ಬೆಂಗಳೂರು, ಜೂನ್ 13- ಪ್ರವೇಶಕ್ಕಾಗಿ ಶಾಲೆಯಿಂದ ಶಾಲೆಗೆ ಅಲೆದು ನಿರಾಶೆಗೊಂಡು ಭವಿಷ್ಯದ ಬಗ್ಗೆ ಕಳವಳಗೊಂಡಿದ್ದ ಬಾಲಕ- ಬಾಲಕಿಯರಿಗೆ ಪ್ರವೇಶ ಕಲ್ಪಿಸಿ ಕೊಡಲಾಗುವುದೆಂಬ ಭರವಸೆ ಇಂದು ನೀಡಲಾಯಿತು.
ಸರ್ಕಾರಿ ಸೆಂಟ್ರಲ್ ಹೈಸ್ಕೂಲಿನಲ್ಲಿ ಶಿಕ್ಷಣ ಸಚಿವ ಶ್ರೀ ಎಸ್. ಆರ್.ಕಂಠಿ ಅವರ ಅಧ್ಯಕ್ಷತೆಯಲ್ಲಿ ನಡೆದ ಹೈಸ್ಕೂಲುಗಳ ಮುಖ್ಯೋಪಾಧ್ಯಾಯರ ಸಭೆಯಲ್ಲಿ, ಸರ್ಕಾರಿ ಕಾರ್ಪೊರೇಷನ್, ಹಾಗೂ ಖಾಸಗಿ 95 ಶಾಲೆಗಳಲ್ಲಿ ಹೊಸದಾಗಿ 253 ಸೆಕ್ಷನ್‌ಗಳನ್ನು ತೆರೆಯಬೇಕೆಂಬ ತೀರ್ಮಾನ ಕೈಗೊಳ್ಳಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.