ADVERTISEMENT

ಶುಕ್ರವಾರ, 21-6-1963

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 19:59 IST
Last Updated 20 ಜೂನ್ 2013, 19:59 IST

ಶ್ವೇತಭವನ - ಕ್ರೆಮ್ಲಿನ್  ನಡುವೆ ನೇರ ಸಂಪರ್ಕ
ಜಿನೀವ, ಜೂನ್ 20 - ಜರೂರು ಲಕ್ಷಣದ ಬಿಕ್ಕಟ್ಟುಗಳನ್ನು ನಿರ್ವಹಿಸಲು ವಾಷಿಂಗ್ಟನ್ ಮತ್ತು ಮಾಸ್ಕೋಗಳ ನಡುವೆ ತುರ್ತು ರೀತಿಯ ನೇರ ಸಂಪರ್ಕ ವ್ಯವಸ್ಥೆಗೆ ಅವಕಾಶ ಮಾಡಿ ಕೊಡುವ `ಹಾಟ್ ಲೈನ್' ಒಪ್ಪಂದಕ್ಕೆ ಅಮೆರಿಕ ಮತ್ತು ರಷ್ಯ ಇಂದು ಸಹಿ ಹಾಕಿದವು.

ಅಪಾಯಮಟ್ಟದಲ್ಲಿ ಬ್ರಹ್ಮಪುತ್ರ
ಗೌಹಾತಿ, ಜೂನ್ 20- ಅಸ್ಸಾಂ ಮತ್ತು ನೀಫಾ ಪ್ರದೇಶದಲ್ಲಿ ವಿಪರೀತ ಮಳೆ ಬೀಳುತ್ತಿರುವುದರ ಪರಿಣಾಮವಾಗಿ ಬ್ರಹ್ಮಪುತ್ರ ನೀರಿನ ಮಟ್ಟವು 160 ಅಡಿ ಗಂಡಂತರ ಮಟ್ಟದಿಂದ 9 ಇಂಚು ಕಡಿಮೆ ಇದೆ ಎಂದು ತಿಳಿದು ಬಂದಿದೆ.

ಗಡಿ ಅಭಿವೃದ್ಧಿಗೆ 2.62 ಕೋಟಿ
ನವದೆಹಲಿ, ಜೂನ್ 20 -  ಗಡಿ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲು ಸಿದ್ಧಪಡಿಸಿರುವ ನೂತನ ಯೋಜನೆಗೆ ಕೇಂದ್ರ ಸರ್ಕಾರ ಮಂಜೂರಾತಿ ಇತ್ತಿದೆ. ಈ ಯೋಜನೆ ಯಂತೆ 2.62 ಕೋಟಿ ರೂ. ಗಳಿಗೂ ಮಿಗಿಲಾದ ಹಣವನ್ನು ಇದಕ್ಕಾಗಿ ವೆಚ್ಚ ಮಾಡಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.