ADVERTISEMENT

ಸೋಮವಾರ, 12-11-1962

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2012, 19:30 IST
Last Updated 11 ನವೆಂಬರ್ 2012, 19:30 IST

ರಕ್ಷಣಾ ಸಚಿವರಾಗಿ ಚವ್ಹಾಣ್
ನವದೆಹಲಿ, ನ. 11- ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ವೈ.ಬಿ. ಚವ್ಹಾಣ್‌ರವರು ಅತಿಶೀಘ್ರವೇ ರಕ್ಷಣಾ ಸಚಿವರಾಗಿ ಕೇಂದ್ರ ಸಚಿವ ಸಂಪುಟವನ್ನು ಸೇರಲಿದ್ದಾರೆಂದು ಬಲ್ಲವಲಯಗಳಿಂದ ಇಂದು ಇಲ್ಲಿ ತಿಳಿದು ಬಂದಿತು.

ನಿನ್ನೆ ದೆಹಲಿಗೆ ಆಗಮಿಸಿದ ಶ್ರೀ ಚವ್ಹಾಣ್‌ರವರು ನಿನ್ನೆ ರಾತ್ರಿ ಮತ್ತು ಇಂದು ಸಂಜೆ ಎರಡು ಬಾರಿ ಪ್ರಧಾನಮಂತ್ರಿ ನೆಹರೂರವರನ್ನು ಭೇಟಿ ಮಾಡಿದ್ದರು.ಅವರು ಕೇಂದ್ರ ಹಣಕಾಸಿನ ಸಚಿವ ಶ್ರೀ ಮೊರಾರ್ಜಿ ದೇಸಾಯಿ ಅವರನ್ನೂ ಭೇಟಿ ಮಾಡಿದ್ದರು. 

ಬಸ್ ದರ ಏರಿಕೆ ಅನಿವಾರ‌್ಯ

ಬೆಂಗಳೂರು, ನ. 11- ನವಂಬರ್ 15 ರಿಂದ ಶೇಕಡ 10 ರಷ್ಟು ಬಸ್ ದರವನ್ನು ಏರಿಸುವುದರಿಂದ ಸಾರಿಗೆ ಕಾರ್ಪೊರೇಷನ್ ಸರ್ಕಾರಕ್ಕೆ ಕೊಡಬೇಕಾಗುವ ಸುಮಾರು 75 ಲಕ್ಷ ರೂಪಾಯಿಗಳಷ್ಟು ಮಾತ್ರ ಹೆಚ್ಚು ಆದಾಯ ಬರುವುದೆಂದು ಸಾರಿಗೆ ಸಚಿವ ಶ್ರೀ ಡಿ. ದೇವರಾಜೇ ಅರಸ್ ಅವರು ನಿನ್ನೆ ವರದಿಗಾರರಿಗೆ ತಿಳಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.