ADVERTISEMENT

ಸೋಮವಾರ, 13–11–1967

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2017, 18:58 IST
Last Updated 12 ನವೆಂಬರ್ 2017, 18:58 IST

ಸಂತಾನ ವೈಭವ

ಡಾಕ್ಕಾ, ನ. 12– ಫರೀದಾಬಾದ್‌ ಜಿಲ್ಲೆಯ ಗ್ರಾಮವೊಂದರಲ್ಲಿ ಮಹಿಳೆಯೊಬ್ಬಳು ಆರು ಗಂಡುಮಕ್ಕಳನ್ನು ಹೆತ್ತಿರುವಳೆಂದು ಇಲ್ಲಿ ವರದಿಯಾಗಿದೆ.

ಕೋಷಿ ಎಂಬ ಗ್ರಾಮದಲ್ಲಿ ನ. 1 ರಂದು ಈ ವಿಸ್ಮಯಕಾರಕ ಪ್ರಕರಣ ವರದಿಯಾಯಿತೆಂದು ‘ಸಿಂಗಬಾದ್‌’ ಪತ್ರಿಕೆ ಪ್ರಕಟಿಸಿ ಎಲ್ಲ ಮಕ್ಕಳು ಜೀವಂತವಾಗಿವೆಯೆಂದು ತಿಳಿಸಿದೆ.

ADVERTISEMENT

**

ಕಾಸರಗೋಡಿನ ಕತೆ: ನಡೆದು ಬಂದ ದಾರಿ

ನವದೆಹಲಿ, ನ. 12– ಕಾಸರಗೋಡು ಮೈಸೂರಿಗೆ ಸೇರಬೇಕು ಎಂಬುದು ಈಗ ಮಹಾಜನ್‌ ಆಯೋಗವು ಮಾಡಿರುವ ಶಿಫಾರಸು. ಆದರೆ 1956 ರಲ್ಲಿಯೇ ಅದು ಮೈಸೂರಿಗೆ ಸೇರಬೇಕಾಗಿತ್ತು ಎಂಬುದು ಈಗ ಬೆಳಕಿಗೆ ಬಂದಿದೆ.

ಮಹಾಜನ್‌ ಶಿಫಾರಸನ್ನು ತಾನು ಒಪ್ಪುವುದಿಲ್ಲ ಎಂದು ಕೇರಳ ಹೇಳುತ್ತಿದೆಯಾದರೂ, ಕಾಸರಗೋಡು ಮೈಸೂರಿಗೇ ಸೇರಬೇಕೆಂದು ಸಮರ್ಥಿಸುವುದಕ್ಕೆ ಇದೀಗ ಅನೇಕ ಅಂಶಗಳು ದೊರತಿವೆ.

ಈ ಅಂಶಗಳನ್ನೇ ಎತ್ತಿಹಿಡಿದು, ಮೈಸೂರು ತನ್ನ ವಾದವನ್ನೂ, ಮಹಾಜನ್‌ ಆಯೋಗದ ವರದಿಯನ್ನೂ ಕೇಂದ್ರವು ಒಪ್ಪುವಂತೆ ಮಾಡುವುದು ಸಾಧ್ಯವಿದೆಯೆಂದು ಅಭಿಪ್ರಾಯಪಡಲಾಗಿದೆ. ಹನ್ನೊಂದು ವರ್ಷಗಳ ಹಿಂದೆಯೇ ಮೈಸೂರಿಗೆ ಸೇರಬೇಕಾಗಿದ್ದ ಕಾಸರಗೋಡಿಗೆ ಅಡ್ಡಿಯುಂಟು ಮಾಡಿದುದು ಮದ್ರಾಸಿನ ಗುಡಲೂರು.

ಕೇಂದ್ರದ ನಿರ್ಧಾರ: 1956 ರಲ್ಲಿ ರಾಜ್ಯಗಳ ಮರುವಿಂಗಡಣೆ ಮಾಡಿದಾಗ, ಕಾಸರಗೋಡನ್ನು ಮೈಸೂರಿಗೂ, ಗುಡಲೂರನ್ನು ಕೇರಳಕ್ಕೂ ಸೇರಿಸಬೇಕೆಂದು ಕೇಂದ್ರ ಸಂಪುಟವು ನಿರ್ಧರಿಸಿತ್ತೆಂದು ಗೊತ್ತಾಗಿದೆ. ಆಗ ಮದ್ರಾಸಿನ ಮುಖ್ಯಮಂತ್ರಿಯಾಗಿದ್ದ ಶ್ರೀ ಕೆ. ಕಾಮರಾಜರು, ನೀಲಗಿರಿ ಜಿಲ್ಲೆಯ ಗುಡಲೂರನ್ನು ಕೇರಳಕ್ಕೆ ಸೇರಿಸಿದರೆ ತಾವು ರಾಜೀನಾಮೆ ಕೊಡುವುದಾಗಿ ಬೆದರಿಕೆ ಹಾಕಿದರಂತೆ.

**

ಸಾಧ್ಯವಾದಷ್ಟು ಅಕ್ಕಿ ಕೊಡಲು ಆಂಧ್ರದ ಭರವಸೆ

ನವದೆಹಲಿ, ನ. 12– ತನಗೆ ಕಷ್ಟಗಳಿದ್ದರೂ ಸಾಧ್ಯವಾಗುವಷ್ಟು ಅಕ್ಕಿಯನ್ನು ಒದಗಿಸಲು ಆಂದ್ರ ಸರಕಾರ ಭರವಸೆ ನೀಡಿದೆ. ಆಂಧ್ರ ಸರಕಾರದ ಈ ಭರವ
ಸೆಯನ್ನು ಅರ್ಥಸಚಿವ ಶ್ರೀ ರಾಮಕೃಷ್ಣ ಹೆಗ್ಗಡೆ ಅವರು ಇಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.