ADVERTISEMENT

ಸೋಮವಾರ, 17-6-1963

​ಪ್ರಜಾವಾಣಿ ವಾರ್ತೆ
Published 16 ಜೂನ್ 2013, 19:59 IST
Last Updated 16 ಜೂನ್ 2013, 19:59 IST

ಅಂತರಿಕ್ಷದಲ್ಲಿ ಮಹಿಳೆ: ರಷ್ಯದ ಹೊಸ ಪ್ರಯೋಗ
ಮಾಸ್ಕೊ, ಜೂನ್ 16- ವಿಶ್ವದ ಪ್ರಪ್ರಥಮ ಮಹಿಳಾ ಗಗನಯಾತ್ರಿಯನ್ನು ರಷ್ಯ ಇಂದು ಅಂತರಿಕ್ಷಕ್ಕೆ ಹಾರಿಸಿತು. ಇಪ್ಪತ್ತಾರು ವರ್ಷ ವಯಸ್ಸಿನ ಆಕೆಯ ಹೆಸರು ವ್ಯಾಲೆಂಟಿನ ಟೆರೆಷ್ಕೋವ.

ಅಂತರಿಕ್ಷ ನೌಕೆ “ವೋಸ್ಕೋಕ್-6”ರಲ್ಲಿ ಭೂಪ್ರದಕ್ಷಿಣೆ ಮಾಡುತ್ತಿರುವ ವ್ಯಾಲೆಂಟಿನ ಟೆರೆಷ್ಕೋವ ಅವರು ಟ್ರಕ್ ಚಾಲಕರೊಬ್ಬರ ಅವಿವಾಹಿತ ಪುತ್ರಿ. ಆಕೆ ಟೈರ್ ಕಾರ್ಖಾನೆಯೊಂದರಲ್ಲಿ ತನ್ನ ಕಾರ್ಮಿಕ ಜೀವನವನ್ನಾರಂಭಿಸಿದರು.

ಮಾರಿ ಕಣ್ಣು ಹೋತನ ಮೇಲೆ; ಪಾಕ್ ಗಲಭೆಗಳಿಗೆ ಭಾರತ ಕಾರಣವಂತೆ!
ರಾವಲ್ಪಿಂಡಿ, ಜೂನ್ 16- ಪಾಕಿಸ್ತಾನದ ಹಲವೆಡೆ ಇತ್ತೀಚೆಗೆ ಉಂಟಾದ ಷಿಯ-ಸುನ್ನಿ ಗಲಭೆಗಳಿಗೆ ತಮ್ಮ ರಾಷ್ಟ್ರಕ್ಕೆ ಆಗಿಂದಾಗ್ಗೆ ಭೇಟಿ ಕೊಡುವ ಭಾರತದ ಉಲೇಮ ಮಾಡಿದ ಭಾಷಣಗಳೇ ಕಾರಣವಿರಬಹುದೆಂದು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ವಿರೋಧ ಪಕ್ಷದ ನಾಯಕ ಸರ್ದಾರ್ ಬಹದ್ದೂರ್‌ಖಾನ್ ನಿನ್ನೆ ಅಭಿಪ್ರಾಯಪಟ್ಟರು.

ಬಜೆಟ್ ಕುರಿತ ಚರ್ಚೆಯಲ್ಲಿ ಬಹದೂರ್‌ಖಾನ್ ಮಾತನಾಡುತ್ತಾ ಭಾರತದ ಉಲೇಮಗಳು ಪಾಕಿಸ್ತಾನಕ್ಕೆ ತಪ್ಪದೆ ಭೇಟಿ ಕೊಟ್ಟು ಭಾಷಣಗಳನ್ನು ಮಾಡುತ್ತಿರುವರೆಂದರು.

ಇಂದಿನಿಂದ ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಮುಷ್ಕರ?
ರಾಯಚೂರ್, ಜೂನ್ 16- ಕಾರ್ಮಿಕ ಬೇಡಿಕೆಗಳನ್ನು ತಕ್ಷಣ ಈಡೇರಿಸಿಕೊಡದೆ ನಾಳೆಯಿಂದ ಸಾರ್ವತ್ರಿಕ ಮುಷ್ಕರ ಹೂಡುವುದಾಗಿ ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಸಂಘ ಆಡಳಿತ ವರ್ಗಕ್ಕೆ ಸೂಚನೆ ಇತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.