ADVERTISEMENT

ಸೋಮವಾರ, 8-4-1963

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2013, 19:59 IST
Last Updated 7 ಏಪ್ರಿಲ್ 2013, 19:59 IST

ಭಾರತದ ನೌಕಾಪಡೆಗೆ ಸಬ್‌ಮೆರೀನ್‌ಗಳು (`ಪ್ರಜಾವಾಣಿ'ಗೆ ಪ್ರತ್ಯೇಕ)
ನವದೆಹಲಿ, ಏ. 7- ಭಾರತದ ನೌಕಾ ಪಡೆಗೆ ಪ್ರಪ್ರಥಮ ಸಬ್‌ಮೆರೀನ್ ಶೀಘ್ರದಲ್ಲಿಯೇ ಬರುವ ಸಂಭವವಿದೆಯೆಂದು ಇಲ್ಲಿ ಖಚಿತವಾಗಿ ತಿಳಿದುಬಂದಿದೆ.

ಇತ್ತೀಚೆಗೆ ಹಿಂದೂಸಾಗರದಲ್ಲಿ ಚೀಣಿ ಸಬ್‌ಮೆರೀನ್‌ದೆಂದು ಭಾವಿಸಲಾದ ಯಾನ ಚಿಹ್ನೆಗಳನ್ನು ಭಾರತದ ನೌಕಾಪಡೆಯ ನೌಕೆಗಳು ಇತ್ತೀಚೆಗೆ ಪತ್ತೆ ಮಾಡಿದವೆಂದು ತಿಳಿದುಬಂದಿದೆ.

ಮೇ ತಿಂಗಳಲ್ಲಿ ಮಲಪ್ರಭಾ ಶಂಕುಸ್ಥಾಪನೆ
ಬೆಂಗಳೂರು, ಏ. 7- ಮೇ ತಿಂಗಳಿನಲ್ಲಿ ಕೇಂದ್ರದ ನೀರಾವರಿ ಸಚಿವ ಶ್ರೀ ಹನೀಫ್ ಮಹಮದ್ ಇಬ್ರಾಹಿಂ ಅವರು ಮಲಪ್ರಭಾ ಯೋಜನೆಯ ಶಂಕುಸ್ಥಾಪನೆಯನ್ನು ನೆರವೇರಿಸುವರು.

ಮೇ ತಿಂಗಳಿನಲ್ಲಿ ಈ ಕಾರ್ಯವನ್ನು ಮಾಡಲು ರಾಜ್ಯಕ್ಕೆ ಆಗಮಿಸಬೇಕೆಂದು ತಾವು ನೀರಾವರಿ ಸಚಿವರನ್ನು ಆಹ್ವಾನಿಸಿರುವುದಾಗಿ ಇಂದು ದೆಹಲಿಯಿಂದ ಹಿಂದಿರುಗಿದ ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪನವರು ವರದಿಗಾರರಿಗೆ ತಿಳಿಸಿದರು.

ಕಾಶ್ಮೀರದ ಬಗ್ಗೆ ರೋಸ್ರೋವರು ಸಲಹೆ ತಂದಿಲ್ಲ:
ಡಾಕಾ, ಏ. 7- ಅಧ್ಯಕ್ಷ ಕೆನೆಡಿಯವರ ವಿಶೇಷ ರಾಯಭಾರಿ ವಾಲ್ಟರ್ ರೋಸ್ರೋವರು ಕಾಶ್ಮೀರದ ಬಗ್ಗೆ ಯಾವ ನಿರ್ದಿಷ್ಟ ಸಲಹೆಯನ್ನು ತಂದಿಲ್ಲವೆಂದು ಪಾಕಿಸ್ತಾನದ ಅಧ್ಯಕ್ಷ ಅಯೂಬ್‌ಖಾನರು ಇಂದು ಇಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.