ADVERTISEMENT

25 ವರ್ಷಗಳ ಹಿಂದೆ: ರಾಜಕೀಯ ತಾಣವಾಗಿರುವ ಜಿಂದಾಲ್

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2023, 0:27 IST
Last Updated 20 ನವೆಂಬರ್ 2023, 0:27 IST
   

ಉತ್ತರಪ್ರದೇಶ: ‘ವಂದೇ ಮಾತರಂ’, ‘ಸರಸ್ವತಿ ವಂದನೆ’ ತಂದ ವಿವಾದ

ಲಖನೌ, ನ. 19– ಉತ್ತರಪ್ರದೇಶದ ಎಲ್ಲ 1.5 ಲಕ್ಷ ಪ್ರಾಥಮಿಕ ಶಾಲೆಗಳಲ್ಲಿ ‘ವಂದೇ ಮಾತರಂ’ ಮತ್ತು ‘ಸರಸ್ವತಿ ವಂದನೆ’ ಕಡ್ಡಾಯವಾಗಿ ಹಾಡುವಂತೆ ಮಾಡುವ ರಾಜ್ಯ ಸರ್ಕಾರದ ನಿರ್ಧಾರ ಬಲು ದೊಡ್ಡ ವಿವಾದವನ್ನು ಹುಟ್ಟುಹಾಕಿದೆ.

ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲ ಮೂರು ಕೋಟಿ ವಿದ್ಯಾರ್ಥಿಗಳು ಪ್ರತಿದಿನ ಕಡ್ಡಾಯವಾಗಿ ‘ವಂದೇ ಮಾತರಂ’ ಮತ್ತು ‘ಸರಸ್ವತಿ ವಂದನೆ’ ಹಾಡಬೇಕು ಎಂದು ಕಲ್ಯಾಣ್‌ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದೆ.

ADVERTISEMENT

ರಾಜಕೀಯ ತಾಣವಾಗಿರುವ ಜಿಂದಾಲ್

ಬೆಂಗಳೂರು, ನ. 19– ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು ವಿಶ್ರಾಂತಿ ಪಡೆಯುವ ಉದ್ದೇಶದಿಂದ ದಾಖಲಾಗಿರುವ ನಗರದ ಹೊರವಲಯದ ಜಿಂದಾಲ್‌ ಪ್ರಕೃತಿ ಚಿಕಿತ್ಸಾ ಕೇಂದ್ರ ಈಗ ರಾಜಕೀಯ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ಮುಖ್ಯಮಂತ್ರಿಯವರ ಆರೋಗ್ಯ ವಿಚಾರಿಸಲು ಕಳೆದ ಎರಡು–ಮೂರು ದಿನಗಳಿಂದ ಸಚಿವರು–ಶಾಸಕರು ಒಬ್ಬರ ನಂತರ ಒಬ್ಬರು ‘ಜಿಂದಾಲ್‌’ಗೆ ಎಡತಾಕು ತ್ತಿದ್ದಾರೆ. ಪಟೇಲ್ ಅವರ ಆರೋಗ್ಯ ವಿಚಾರಿಸುವುದರ ಜೊತೆಗೆ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಅಲ್ಲಿ ಚರ್ಚೆ
ನಡೆಯುತ್ತಿರುವುದೇ ವಿಶೇಷವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.