ADVERTISEMENT

ಶುಕ್ರವಾರ, 22–4–1994

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 20:15 IST
Last Updated 21 ಏಪ್ರಿಲ್ 2019, 20:15 IST

ಕ್ಷಿಪಣಿ ಪರೀಕ್ಷೆ ನಿಲುಗಡೆ ಇಲ್ಲ: ಪ್ರಧಾನಿ ಸ್ಪಷ್ಟನೆ
ನವದೆಹಲಿ, ಏ. 21 (ಯುಎನ್‌ಐ)– ಭಾರತವು ಯಾವುದೇ ಒತ್ತಡಕ್ಕೆ ಮಣಿದು ತನ್ನ ಕ್ಷಿಪಣಿ ಕಾರ್ಯಕ್ರಮವನ್ನು ನಿಲ್ಲಿಸುವುದಿಲ್ಲವೆಂದು ಪ್ರಧಾನಿ ಪಿ.ವಿ. ನರಸಿಂಹ
ರಾವ್ ಅವರು ಇಂದು ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿದರು.

ರಕ್ಷಣಾ ಪಡೆಗಳಿಗೆ ವಿವಿಧ ಕ್ಷಿಪಣಿಗಳ ಸೇರ್ಪಡೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು ಅಗ್ನಿ ಮತ್ತು ಇತರ ಕ್ಷಿಪಣಿಗಳ ಪರೀಕ್ಷೆಯನ್ನು ನಿಲ್ಲಿಸುವಂತೆ ಅಮೆರಿಕವೂ ಸೇರಿದಂತೆ ಯಾವುದೇ ದೇಶದಿಂದ ಒತ್ತಡ ಬಂದಿಲ್ಲ ಎಂದು ತಿಳಿಸಿದರು. ವಿದೇಶದಿಂದ ಒತ್ತಡ ಬಂದು ‘ಅಗ್ನಿ’ ಕಾರ್ಯಕ್ರಮವನ್ನು ನಿಲ್ಲಿಸಲಾಗಿದೆ ಎಂಬ ಆಪಾದನೆಯನ್ನು ಅವರು ಅಲ್ಲಗಳೆದರು.

‘ಚಿನ್ನಾರಿ ಮುತ್ತ’ ಶ್ರೇಷ್ಠ ಪ್ರಾದೇಶಿಕ ಚಿತ್ರ
ನವದೆಹಲಿ, ಏ. 21 (ಯುಎನ್‌ಐ)– 1993ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಇಂದು ಪ್ರಕಟಿಸಲಾಗಿದ್ದು ಟಿ.ಎಸ್. ನಾಗಾಭರಣ ನಿರ್ದೇಶಿಸಿದ ‘ಚಿನ್ನಾರಿ ಮುತ್ತ’ ಚಿತ್ರಕ್ಕೆ ಕನ್ನಡದ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ದೊರೆತಿದೆ. ಇದರ ಜತೆಗೆ ಎಸ್.ಆರ್. ರಾಜನ್ ನಿರ್ದೇಶಿಸಿರುವ ಕೊಡವ ಭಾಷೆಯ ‘ಮಂದಾರ ಪೂ’ ಮತ್ತು ಡಾ. ರಿಚರ್ಡ್ ಕ್ಯಾಸ್ಟಲಿನೊ ನಿರ್ದೇಶಿಸಿರುವ ತುಳು ಭಾಷೆಯ ‘ಬಂಗಾರ್ ಪಟ್ಲೇರ್’ ಚಿತ್ರಗಳಿಗೂ ಪ್ರಾದೇಶಿಕ ಭಾಷಾ ಪ್ರಶಸ್ತಿ ಲಭಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.