ADVERTISEMENT

ಹುಬ್ಬಳ್ಳಿ ಶಾಂತ, ಕರ್ಫ್ಯೂ ರದ್ದು

ಬುಧವಾರ,

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 19:21 IST
Last Updated 16 ಆಗಸ್ಟ್ 2019, 19:21 IST

ಹುಬ್ಬಳ್ಳಿ ಶಾಂತ, ಕರ್ಫ್ಯೂ ರದ್ದು

ಹುಬ್ಬಳ್ಳಿ, ಆ. 16– ಸೋಮವಾರ ಗೋಲಿಬಾರ್, ಕರ್ಫ್ಯೂ ಮತ್ತು ಹಿಂಸಾಚಾರದ ಘಟನೆಗಳಿಂದ ತಲ್ಲಣಿಸಿದ್ದ ಹುಬ್ಬಳ್ಳಿಯಲ್ಲಿ ಇಂದು ಬಹುತೇಕ ಶಾಂತಿ ನೆಲೆಸಿದ್ದು, ಒಂದೆರಡು ಕಡೆ ಕಲ್ಲುತೂರಾಟ, ರಸ್ತೆ ತಡೆ ಬಿಟ್ಟರೆ ಯಾವುದೇ ಅಹಿತ ಘಟನೆ ಜರುಗಲಿಲ್ಲ. ಇಂದು ಮಧ್ಯರಾತ್ರಿವರೆಗೆ ಜಾರಿಯಲ್ಲಿರುವ ಕರ್ಫ್ಯೂವನ್ನು ವಿಸ್ತರಿಸುವ ಯೋಚನೆ ಇಲ್ಲ ಎಂದು ಡಿಜಿಪಿ ರಾಮಲಿಂಗಂ ತಿಳಿಸಿದ್ದಾರೆ.

ಬಿಜೆಪಿ ನಿಷೇಧಕ್ಕೆ ಸ್ವಾಮಿ ಆಗ್ರಹ

ADVERTISEMENT

ಬೆಂಗಳೂರು, ಆ. 16– ‘ಹುಬ್ಬಳ್ಳಿಯ ವಿವಾದಿತ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಹಟ ಹಿಡಿದು, ಐವರು ಮುಗ್ಧರ ಸಾವಿಗೆ ಕಾರಣವಾದ ಕೋಮುವಾದಿ ಬಿಜೆಪಿಯನ್ನು ಕೂಡಲೇ ನಿಷೇಧಿಸಬೇಕು’ ಎಂದು ಜನತಾಪಕ್ಷದ ಅಧ್ಯಕ್ಷ ಡಾ. ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದರು.

‘ತ್ರಿವರ್ಣ ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆ ಜನಗಣಮನವನ್ನು ಎಂದೂ ಗೌರವಿಸದ ಆರ್.ಎಸ್.ಎಸ್.ನ ರಾಜಕೀಯ ಮುಖವಾಡ ಬಿಜೆಪಿ’ ಎಂದು ಈದ್ಗಾ ಮೈದಾನದಲ್ಲಿ ಧ್ವಜಾರೋಹಣಕ್ಕೆ ಬಿಜೆಪಿ ಪಟ್ಟು ಹಿಡಿದದ್ದನ್ನು ಇಂದು ಪತ್ರಿಕಾ
ಗೋಷ್ಠಿಯಲ್ಲಿ ಬಲವಾಗಿ ಖಂಡಿಸಿದ ಡಾ. ಸ್ವಾಮಿ, ಬಿಜೆಪಿಯನ್ನು ನಿಷೇಧಿಸುವಂತೆ ಬಹು ಹಿಂದೆಯೇ ತಾವು ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿರುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.