ADVERTISEMENT

25 ವರ್ಷಗಳ ಹಿಂದೆ | ಬುಧವಾರ 8–3–1995

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 20:06 IST
Last Updated 7 ಮಾರ್ಚ್ 2020, 20:06 IST

ಮುಕ್ತ ಚುನಾವಣೆ ಶಂಕಾಸ್ಪದ ಬಿಹಾರದಲ್ಲಿ ಅರಾಜಕರತೆ: ಪ್ರಧಾನಿ ಕಟು ಟೀಕೆ
ಪಟ್ನಾ, ಮಾರ್ಚಿ 7(ಯುಎನ್‌ಐ, ಪಿಟಿಐ) – ಬಿಹಾರದಲ್ಲಿ ಎಲ್ಲ ರಂಗಗಳಲ್ಲಿಯೂ ಸರ್ಕಾರ ವಿಫಲವಾಗಿದ್ದು ಅರಾಜಕತೆ ನೆರೆಯೂರಿದೆ. ಇದರಿಂದಾಗಿ ಮತದಾರರು ನಿರ್ಭಯವಾಗಿ ಮತ ಚಲಾಯಿಸುವುದೇ ಶಂಕಾಸ್ಪವಾಗಿದೆ ಎಂದು ಪ್ರಧಾನಿ ಪಿ. ವಿ. ನರಸಿಂಹ ರಾವ್‌ ಅವರು ಇಂದು ತೀವ್ರವಾಗಿ ಆರೋಪಿಸಿದರು.

ಆಡಳಿತ ನಡೆಸುತ್ತಿರುವ ಜನತಾ ದಳ ಸರ್ಕಾರದಿಂದಾಗಿ ಹಿಂಸಾಚಾರ ಮಿತಿಮೀರಿದೆ. ಕಾಯ್ದೆ ವ್ಯವಸ್ಥೆ ಪೂರ್ಣ ಕುಸಿದಿದೆ ಎಂದು ಅವರು ಜಾಡಿಸಿದ್ದಾರೆ.

ತುಂಗಭದ್ರಾ ನೀರು ಹಂಚಿಕೆ: ಕರ್ನಾಟಕ–ಆಂಧ್ರ ಒಪ್ಪಂದ
ಬೆಂಗಳೂರು, ಮಾರ್ಚಿ 7 – ತುಂಗ್ರಭದ್ರಾ ಜಲಾಶಯದ ಬಲ ಮೇಲ್ದಂಡೆ ಕಾಲುವೆಯಿಂದ ಉಳಿದಿರುವ ಅವಧಿಯ ಹಿಂಗಾರು ಬೆಳೆಗೆ 2.4 ಟಿಎಂಸಿ ನೀರನ್ನು ಹಂಚಿಕೊಳ್ಳಲು ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳು ಒಪ್ಪಂದ ಮಾಡಿಕೊಂಡಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.