ADVERTISEMENT

ಮಂಗಳವಾರ, 21–6–1994

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 19:45 IST
Last Updated 20 ಜೂನ್ 2019, 19:45 IST

ಚವಾಣ್ ಜತೆ ಸಿಕ್ಕಿಂ ರಾಜ್ಯಪಾಲರ ಚರ್ಚೆ
ನವದೆಹಲಿ, ಜೂನ್ 20 (ಯುಎನ್‌ಐ, ಪಿಟಿಐ)–
ಸಿಕ್ಕಿಂನ ರಾಜ್ಯಪಾಲ ಅಡ್ಮಿರಲ್ ಆರ್.ಎಚ್. ತಹಿಲಿಯಾನಿ ಅವರು ಇಂದು ಗೃಹ ಸಚಿವ ಎಸ್.ಬಿ. ಚವಾಣ್ ಅವರನ್ನು ಭೇಟಿಯಾಗಿ, ಮಾಜಿ ಮುಖ್ಯಮಂತ್ರಿ ನರಬಹಾದೂರ್ ಭಂಡಾರಿ ಅವರೂ ಸೇರಿದಂತೆ 17 ಶಾಸಕರು ವಿಧಾನಸಭೆಗೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ವಿವರಿಸಿದರು. ಆದರೆ ಈ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರುವುದು ಹೆಚ್ಚುಕಡಿಮೆ ಖಚಿತವಾಗಿದೆ.

ಮಸೀದಿಯಲ್ಲಿ ಸ್ಫೋಟ: 100 ಸಾವು
ಲಂಡನ್, ಜೂನ್ 20 (ಡಿಪಿಎ)–
ಇರಾನಿನ ಈಶಾನ್ಯ ಭಾಗದ ನಗರ ಮಷ್‌ಹಾದ್‌ನಲ್ಲಿರುವ ಶಿಯಾ ಸಮುದಾಯದ ಮಸೀದಿಯಲ್ಲಿ ಇಂದು ಭಾರಿ ಬಾಂಬ್ ಸ್ಫೋಟಿಸಿದ್ದರಿಂದ 100ಕ್ಕೂ ಹೆಚ್ಚು ಜನ ಸತ್ತರು.

ಮದುವೆ ಊಟ ಉಂಡು 7 ಮಂದಿ ಮಸಣಕ್ಕೆ
‌ಮೈಸೂರು, ಜೂನ್ 20–
ಮದುವೆ ಊಟ ಮಾಡಿ ಅಸ್ವಸ್ಥರಾಗಿದ್ದ ಹಲವಾರು ಮಂದಿಯಲ್ಲಿ ಕನಿಷ್ಠ ಏಳು ಮಂದಿ ಮೃತಪಟ್ಟ ದಾರುಣ ಘಟನೆ ನಂಜನಗೂಡು ತಾಲ್ಲೂಕಿನ ಕೊಣನೂರು ಮತ್ತು ಹೆಜ್ಜಿಗೆಯಿಂದ ವರದಿಯಾಗಿದೆ.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.