ಪ್ರಧಾನಿ ವಾಪಸ್ ನಂತರ ಪೆಟ್ರೋಲ್ ಬೆಲೆ ಹೆಚ್ಚಳ?
ನವದೆಹಲಿ, ಸೆಪ್ಟೆಂಬರ್ 11 (ಪಿಟಿಐ)– ಪ್ರಧಾನಿ ವಾಜಪೇಯಿ ಅವರು, ಅಮೆರಿಕ ಪ್ರವಾಸದಿಂದ ಮರಳಿದ ನಂತರ ಕೇಂದ್ರ ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಿಸುವ ನಿರೀಕ್ಷೆ ಇದೆ.
ಅಂತರರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಏರುತ್ತಿರುವ ತೈಲದ ಬೆಲೆ ಉಂಟು ಮಾಡಿರುವ ಆತಂಕವನ್ನು ಕಡಿಮೆ ಮಾಡಲು ತೈಲ ಉತ್ಪಾದನೆ ಯನ್ನು ಪ್ರತಿ ದಿನ ಎಂಟು ಲಕ್ಷ ಬ್ಯಾರೆಲ್‌ಗೆ ಹೆಚ್ಚಿಸಲು ಒಪೆಕ್ ನಿನ್ನೆಯಷ್ಟೆ ನಿರ್ಧರಿಸಿದೆ. ಇದಕ್ಕೆ ಭಾರತ ತನ್ನ ನಿರಾಶೆ ವ್ಯಕ್ತಪಡಿಸಿದೆ.
ಕೃಷ್ಣ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಬಿಜೆಪಿ ಸಜ್ಜು
ಮಂಗಳೂರು, ಸೆಪ್ಟೆಂಬರ್ 11– ಭ್ರಷ್ಟಾಚಾರ, ಅಪರಾಧಿಗಳ ತಾಣವಾಗಿ ರಾಜ್ಯವು ಮಾರ್ಪಾಡಾಗುತ್ತಿರುವು ದನ್ನು ತಡೆಗಟ್ಟಲು ವಿಫಲವಾಗಿರುವ ಎಸ್.ಎಂ. ಕೃಷ್ಣ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಭಾರತೀಯ ಜನತಾ ಪಕ್ಷವು ಅಕ್ಟೋಬರ್ 9ರಂದು ರಾಜ್ಯದಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಿದೆ.
ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ನಂತರ ಇಲ್ಲಿಗೆ ಭೇಟಿ ನೀಡಿದ್ದ ಬಸವರಾಜ ಪಾಟೀಲ್ ಸೇಡಂ, ಈ ವಿಷಯ ಪ್ರಕಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.