ADVERTISEMENT

25 ವರ್ಷಗಳ ಹಿಂದೆ ಭಾನುವಾರ, 8–12–1996

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 21:19 IST
Last Updated 7 ಡಿಸೆಂಬರ್ 2021, 21:19 IST
   

ಭ್ರಷ್ಟಾಚಾರ: ಜಯಲಲಿತಾ ಬಂಧನ 21ರವರೆಗೆ ನ್ಯಾಯಾಂಗ ವಶಕ್ಕೆ

ಚೆನ್ನೈ, ಡಿ. 7 (ಯುಎನ್‌ಐ, ಪಿಟಿಐ)– ತಮಿಳುನಾಡು ಸರ್ಕಾರ ರೂ. 65 ಕೋಟಿ ವೆಚ್ಚದಲ್ಲಿ ಹಳ್ಳಿಗಳಿಗೆ ವಿತರಿಸಲು ಖರೀದಿಸಿದ 45,000 ಬಣ್ಣದ ಟಿ.ವಿ.ಗಳಲ್ಲಿ ರೂ. 8.5 ಕೋಟಿ ಮೊತ್ತದ ರುಷುವತ್ತು ಪಡೆದಿದ್ದಾರೆ ಎಂಬ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರನ್ನು ರಾಜ್ಯ ಸಿಐಡಿ ಪೊಲೀಸರು ಇಂದು ಬೆಳಿಗ್ಗೆ ಬಂಧಿಸಿದರು.

ಅವರನ್ನು ನಂತರ ಮುಖ್ಯ ಸೆಷನ್ಸ್‌ ನ್ಯಾಯಾಧೀಶ ಎ.ರಾಮಮೂರ್ತಿ ಅವರ ನಿವಾಸದಲ್ಲಿ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಜಯಲಲಿತಾ ಅವರನ್ನು ಈ ತಿಂಗಳ 21ರವರೆಗೆ ನ್ಯಾಯಾಂಗ ಕಸ್ಟಡಿಗೆ ಕಳುಹಿಸಿದರು. ನಂತರ ಜಯಲಲಿತಾ ಅವರನ್ನು ಸೆಂಟ್ರಲ್‌ ಜೈಲಿಗೆ ಕಳುಹಿಸಲಾಯಿತು.

ADVERTISEMENT

ಭ್ರಷ್ಟಾಚಾರ ಪ್ರಕರಣಗಳಲ್ಲಿ ಆರೋಪಿಯಾಗಿರುವ ಜಯಲಲಿತಾ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ 7 ಅರ್ಜಿಗಳನ್ನು ಮದ್ರಾಸ್‌ ಹೈಕೋರ್ಟ್‌ ನಿನ್ನೆ ತಿರಸ್ಕರಿಸಿತ್ತು. ಇಂದು ಬೆಳಿಗ್ಗೆ 7.15ಕ್ಕೆ ಜಯಲಲಿತಾ ಅವರ ಮನೆ ‘ವೇದಾಂತ ನಿಲಯಂ’ ಅನ್ನು ಪ್ರವೇಶಿಸಿದ ಸಿಐಡಿ ಪೊಲೀಸರು ಅವರನ್ನು ಬಂಧಿಸಿದರು. ಮುಂಜಾಗ್ರತಾ ಕ್ರಮವಾಗಿ ಎಐಎಡಿಎಂಕೆಯ 2000 ಕಾರ್ಯಕರ್ತರನ್ನು ಬಂಧಿಸಲಾಯಿತು.

ದಳದಲ್ಲಿ ಸದ್ಯಕ್ಕೆ ಕದನವಿರಾಮ

ಬೆಂಗಳೂರು, ಡಿ. 7– ರಾಜ್ಯ ಜನತಾದಳದ ಭಿನ್ನಮತೀಯ ಶಾಸಕರು ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ, ಭಿನ್ನಾಭಿಪ್ರಾಯದ ಬಗ್ಗೆ ಬಿಚ್ಚು ಮನಸ್ಸಿನ ಚರ್ಚೆ ನಡೆಸಿದ ಫಲಶ್ರುತಿಯಂತೆ ಭಿನ್ನಮತವೆಂಬ ಬೀಸೋದೊಣ್ಣೆಯಿಂದ ಸದ್ಯಕ್ಕೆ ಪಟೇಲ್‌ ಪಾರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.