ADVERTISEMENT

ಗುರುವಾರ, 6 ಏಪ್ರಿಲ್‌, 1995

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 21:30 IST
Last Updated 5 ಏಪ್ರಿಲ್ 2020, 21:30 IST

ಈ ವರ್ಷ 2,000 ವೈದ್ಯರು, ಪೂರಕ ಸಿಬ್ಬಂದಿ ನೇಮಕಕ್ಕೆ ಅಸ್ತು

ಬೆಂಗಳೂರು, ಏ. 5– ಆರೋಗ್ಯ ಇಲಾಖೆಯಲ್ಲಿ ಅಗತ್ಯವಾಗಿರುವ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿಯ 2,000 ಹುದ್ದೆಗಳನ್ನು ಈ ವರ್ಷದೊಳಗೆ ತುಂಬಲಾಗುವುದು ಎಂದು ಆರೋಗ್ಯ ಸಚಿವ ಎಚ್‌.ಸಿ.ಮಹದೇವಪ್ಪ ಅವರು ಇಂದು ವಿಧಾನಸಭೆಯಲ್ಲಿ ಪ್ರಕಟಿಸಿದರು.

ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿಯ ಹುದ್ದೆಗಳು ಖಾಲಿಯಿರುವ ಬಗೆಗೆ ಸದಸ್ಯರು ಕೇಳಿದ ಪ್ರಶ್ನೆಗಳಿಗೆ, ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವವರು 15 ದಿನಗಳಲ್ಲಿ ವರದಿ ಮಾಡಿಕೊಳ್ಳದಿದ್ದರೆ ರೋಸ್ಟರ್‌ ಪದ್ಧತಿಗೆ ಅನುಸಾರವಾಗಿ ಆ ಹುದ್ದೆಗಳಿಗೆ ಇತರರನ್ನು ನೇಮಿಸಲುಪರಿಶೀಲಿಸುವುದಾಗಿ ಹೇಳಿದರು.

ADVERTISEMENT

ಪಿಸಿಸಿ, ಎಐಸಿಸಿ ಪುನರ್‌ರಚನೆ

ನವದೆಹಲಿ, ಏ. 5– ಮುಂದಿನ ವರ್ಷ ಲೋಕಸಭೆ ಚುನಾವಣೆ ಎದುರಿಸಬೇಕಾಗಿರುವ ಹಿನ್ನೆಲೆಯಲ್ಲಿ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ), ಎಐಸಿಸಿ ಮತ್ತು ಪ್ರದೇಶ ಕಾಂಗೈ ಸಮಿತಿಗಳನ್ನು (ಪಿಸಿಸಿ) ತಕ್ಷಣವೇ ಪುನರ್‌ರಚಿಸಲು ಇಂದು ಇಲ್ಲಿ ನಡೆದ ಕಾಂಗೈ ಕಾರ್ಯಕಾರಿ ಸಮಿತಿ ಸಭೆಯು ಪಕ್ಷಾಧ್ಯಕ್ಷ ಪಿ.ವಿ.ನರಸಿಂಹರಾವ್‌ ಅವರಿಗೆ ಸಂಪೂರ್ಣ ಅಧಿಕಾರ ನೀಡಿತು.

ಪಕ್ಷದೊಳಗೆ ಕಟ್ಟುನಿಟ್ಟಾಗಿ ಶಿಸ್ತು ಜಾರಿಗೆ ಕ್ರಮ ಕೈಗೊಳ್ಳುವಂತೆ ಅದು ರಾವ್‌ ಅವರನ್ನು ಕೋರಿತು. ‘ಎಲ್ಲ ವಿಷಯಗಳಲ್ಲಿ ಪಕ್ಷದ ನಾಯಕತ್ವಕ್ಕೆ ಮುಕ್ತ ಹಸ್ತ, ಪೂರ್ಣ ಬೆಂಬಲ ನೀಡಿದರೆ ಮಾತ್ರ ಇದು ಸಾಧ್ಯ’ ಎಂದು ನಿರ್ಣಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.