ADVERTISEMENT

25 ವರ್ಷಗಳ ಹಿಂದೆ | ಭಾನುವಾರ, 30–4–1995

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2020, 20:00 IST
Last Updated 29 ಏಪ್ರಿಲ್ 2020, 20:00 IST

311ನೇ ವಿಧಿ: ಅಧಿಕಾರಿಗಳಿಗೆ ವಿಪರೀತ ರಕ್ಷಣೆ
ಬೆಂಗಳೂರು, ಏ. 29– ‘ಸಂವಿಧಾನದ 311ನೇ ವಿಧಿಯು ಸರ್ಕಾರಿ ಅಧಿಕಾರಿಗಳಿಗೆ ವಿಪರೀತ ರಕ್ಷಣೆ ನೀಡಿದ್ದು, ಭ್ರಷ್ಟಾಚಾರದ ಪ್ರಕರಣಗಳಲ್ಲಿ ಅವರನ್ನು ಸೇವೆಯಿಂದ ವಜಾ ಮಾಡುವುದು ಬಹುತೇಕ ಅಸಾಧ್ಯವಾಗಿದೆ’ ಎಂದು ಕರ್ನಾಟಕ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಜಯಪ್ರಕಾಶ್‌ ಇಂದು ಇಲ್ಲಿ ಅಭಿಪ್ರಾಯಪಟ್ಟರು.

‘ಸಾರ್ವಜನಿಕ ಆಡಳಿತದಲ್ಲಿ ನೈತಿಕ ಬದ್ಧತೆ ಸಂಘಟನೆ’ಯು (ಎಸ್‌ಐಪಿಎ) ಇಂದು ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ‘ಲೋಕಾಯುಕ್ತ– ಭ್ರಷ್ಟಾಚಾರ ತಡೆಯುವಲ್ಲಿ ಎಷ್ಟು ಪರಿಣಾಮಕಾರಿ‍’ ಎಂಬ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಯಾವುದೇ ತಪ್ಪುಗಳಿಗೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವುದು ಬಲು ಕಷ್ಟ. ಕೆಲಸ ಮಾಡುವ ಕೆಲವರೇನೋ ಜವಾಬ್ದಾರಿ ಹೊತ್ತಾರು, ಆದರೆ ಕೆಲಸವೇ ಮಾಡದ ಮಂದಿಯ ಕಥೆಯೇನು’ ಎಂದು ಅವರು ಪ್ರಶ್ನಿಸಿದರು.

ADVERTISEMENT

ವೃತ್ತಿಶಿಕ್ಷಣ: ನಿಲುವು ರೂಪಿಸಲು ಸಮಿತಿ
ಬೆಂಗಳೂರು, ಏ. 29– ವೃತ್ತಿಪರ ಶಿಕ್ಷಣದ ಪ್ರವೇಶ ನೀತಿ ಕುರಿತು ಸುಪ್ರೀಂ ಕೋರ್ಟ್‌ ಮುಂದೆ ಮಂಡಿಸಬೇಕಾದ ಸರ್ಕಾರದ ಖಚಿತವಾದ ನಿಲುವಿನ ಬಗ್ಗೆ ಪರಿಶೀಲಿಸಲು ಕಾನೂನು ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ದೇವೇಗೌಡರು ಇಂದು ಇಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.