ಬಿಕ್ಕಟ್ಟು ಎದುರಿಸಲು ಪಕ್ಷಕ್ಕೆ ರಾವ್ ಕರೆ
ಶ್ರೀಪೆರುಂಬುದೂರು, ಮೇ 21 (ಪಿಟಿಐ)– ಕಾಂಗ್ರೆಸ್ (ಐ) ಅಪಾಯದ ಅಂಚಿನಲ್ಲಿ ಸಾಗುತ್ತಿದೆ. ಬಿರುಗಾಳಿಯನ್ನು ಎದುರಿಸಿ ಏರುಪೇರಿನಿಂದ ಎದ್ದು ವಿಜಯ ಗಳಿಸಲು ಎಚ್ಚರದಿಂದ ಸಾಗಬೇಕಾಗಿದೆ ಎಂದು ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ಇಂದು ಇಲ್ಲಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ದೆಹಲಿಯಲ್ಲಿ ಭಿನ್ನಮತೀಯರ ರ‍್ಯಾಲಿ ನಡೆದು ಕಾಂಗೈ ಬಿಕ್ಕಟ್ಟನ್ನು ಎದುರಿಸಿದ ನಂತರ ನಡೆದ ಮೊದಲ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿಯವರು, ಪಕ್ಷ ಒಡೆಯುವುದರ ವಿರುದ್ಧ ಪರೋಕ್ಷ ಎಚ್ಚರಿಕೆ ನೀಡಿದರು.
ಗ್ರಾಮೀಣಾಭಿವೃದ್ಧಿಗೆ ನಿರ್ದೇಶನಾಲಯ ಶೀಘ್ರ
ಬಳ್ಳಾರಿ, ಮೇ 21– ಗ್ರಾಮೀಣಾಭಿವೃದ್ಧಿ ಇಲಾಖೆಗೆ ಪ್ರತ್ಯೇಕ ನಿರ್ದೇಶನಾಲಯ ರಚನೆಯತ್ತ ಸರ್ಕಾರ ಈಗಾಗಲೇ ಹೆಜ್ಜೆ ಇರಿಸಿದ್ದು, ಈ ಸಂಬಂಧ ಕಾನೂನು ಮತ್ತಿತರ ಇಲಾಖೆಗಳೊಂದಿಗೆ ಸಂಪರ್ಕ ಬೆಳೆಸಿರುವುದಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್
ಸಚಿವ ಎಂ.ಪಿ.ಪ್ರಕಾಶ್ ಆಶ್ವಾಸನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.